Advertisement

ಎಸ್‌ಇಜೆಡ್‌ಗಳಿಗೆ ಕೇರಳ ಮಾದರಿ ತೆರಿಗೆ ವಿನಾಯಿತಿ ಭಾಗ್ಯ

09:05 AM Aug 23, 2017 | Harsha Rao |

ಬೆಂಗಳೂರು: ರಾಜ್ಯಕ್ಕೆ ಕೈಗಾರಿಕೆಗಳನ್ನು ಆಕರ್ಷಿಸಲು ಹಾಗೂ ಇರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ವಿಶೇಷ ರಿಯಾಯಿತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಆಗಾಗ ಘೋಷಿಸುವ ಸರ್ಕಾರ ಇದೀಗ ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯಗಳಿಗೆ (ಎಸ್‌ಇಜೆಡ್‌) ಗ್ರಾಮ ಪಂಚಾಯಿತಿಗಳಿಂದ “ತೆರಿಗೆ ವಿನಾಯ್ತಿ
ಭಾಗ್ಯ’ ಒದಗಿಸಲು ಮುಂದಾಗಿದೆ.

Advertisement

ಎಸ್‌ಇಜೆಡ್‌ಗಳ ಅಭಿವೃದಿಟಛಿದಾರರು ಹಾಗೂ ಕೈಗಾರಿಕಾ ಘಟಕಗಳನ್ನು ಉತ್ತೇಜಿಸಲು ನೆರೆಯ ಕೇರಳ ರಾಜ್ಯವು “ಕೇರಳ ಪಂಚಾಯತ್‌ರಾಜ್‌ ಕಾಯ್ದೆ 1994ರ ಪ್ರಕರಣ 200ರಡಿ ತೆರಿಗೆಯಿಂದ ವಿನಾಯಿತಿ ನೀಡಿದೆ. ಅದರಂತೆ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ-1993ರಲ್ಲಿ ಮಂಗಳೂರು ಎಸ್‌ಇಜೆಡ್‌ ಪ್ರದೇಶದ ಎಸ್‌ಇಜೆಡ್‌ ಅಭಿವೃದಿಟಛಿದಾರರು ಮತ್ತು ಕೈಗಾರಿಕಾ ಘಟಕಗಳನ್ನು ಉತ್ತೇಜಿಸಲು ತೆರಿಗೆಯಿಂದ ವಿನಾಯಿತಿ ನೀಡುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ಅಭಿವೃದಿಟಛಿ ಆಯುಕ್ತರು ಹಾಗೂ ನಿರ್ದೇಶಕರು ಕೋರಿಕೆ ಸಲ್ಲಿಸಿದ್ದರು. ಅದನ್ನು ಗ್ರಾಮೀಣಾಭಿವೃದಿಟಛಿ ಇಲಾಖೆ ತಾತ್ವಿಕವಾಗಿ ಒಪ್ಪಿಕೊಂಡಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರದ ರಫ್ತು ಹೆಚ್ಚಿಸುವ ದೃಷ್ಟಿಯಿಂದ ಈ ವಲಯದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳಿಗೆ ವಿಶೇಷ
ಸ್ಥಾನಮಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ತೆರಿಗೆ ವಿನಾಯಿತಿ
ನೀಡಬೇಕಾಗುತ್ತದೆ. ಇದು ಸರ್ಕಾರಿ ಆದೇಶವಾಗಿ ಜಾರಿಗೊಂಡರೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಜ್ಯದ ಎಲ್ಲಾ ಎಸ್‌ಇಜೆಡ್‌ಗಳಿಗೆ ಗ್ರಾಪಂಗಳು ವಿಧಿಸುವ ತೆರಿಗೆಯಿಂದ ವಿನಾಯಿತಿ ಸಿಗಲಿದೆ. ತೆರಿಗೆ ವಿನಾಯಿತಿ ನೀಡುವುದರಿಂದ
ಗ್ರಾಪಂಳಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಅರ್ಧದಷ್ಟನ್ನು ಸರ್ಕಾರವೇ ಭರಿಸಲಿದ್ದು, ರಾಜ್ಯ ಸರ್ಕಾರವು ಗ್ರಾಪಂಗಳಿಗೆ ನೀಡುತ್ತಿರುವ ಶಾಸನಾತ್ಮಕ ಅನುದಾನಕ್ಕೆ ಸರಾಸರಿ ಶೇ.50ರಷ್ಟು ಹೆಚ್ಚು ಬಿಡುಗಡೆಗೊಳಿಸಲಾಗುವುದು. ಇದಕ್ಕೆ ಗ್ರಾಮೀಣಾಭಿವೃದಿಟಛಿ ಸಚಿವರು ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಇದರ ಜಾರಿಗೆ ಬೇಕಾಗುವ ಸಿದಟಛಿತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನೂನು ತಿದ್ದುಪಡಿ: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ- 1993ರ ಪ್ರಕರಣ 199ರಂತೆ ಗ್ರಾಮ ಪಂಚಾಯಿತಿಗಳು ಆ ಪಂಚಾಯಿತಿ ವ್ಯಾಪ್ತಿಯ ಕೃಷಿ ತೆರಿಗೆ ನಿರ್ಧರಣೆಗೆ ಒಳಪಡದ ಕಟ್ಟಡಗಳು
ಮತ್ತು ಭೂಮಿಗಳ ಮೇಲೆ ಸ್ವತ್ತಿನ ಬಂಡವಾಳ ಮೌಲ್ಯದ ಆಧಾರದಲ್ಲಿ ಹಾಗೂ ಗ್ರಾಮ ಪಂಚಾ ಯಿತಿಯು ಕುಡಿಯುವುದಕ್ಕೆ ಮತ್ತು ಇತರ ಉದ್ದೇಶಗಳಿಗಾಗಿ ನೀರು ಸರಬರಾಜು ಮಾಡಲು ತೆರಿಗೆ ವಿಧಿಸಲು ಅವಕಾಶ ನೀಡಲಾಗಿದೆ. ಆದರೆ, ಕಾಯ್ದೆಯಲ್ಲಿ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿಗೆ ಅವಕಾಶವಿಲ್ಲ. ಹಾಗಾಗಿ ಕೈಗಾರಿಕೆಗಳಿಗೆ
ತೆರಿಗೆ ವಿನಾಯಿತಿ ನೀಡುವ ಸಲುವಾಗಿ 1993ರ ಅಧಿನಿಯಮದ ನಾಲ್ಕನೇ ಅನುಸೂಚಿಗೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾಮ ಪಂಚಾಯಿತಿ ತೆರಿಗೆಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು-2017ಕ್ಕೆ ತಿದ್ದುಪಡಿ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next