Advertisement

ಝೀಕಾ ಹಿಮ್ಮೆಟ್ಟಿಸಲು ಕೇಂದ್ರದ ವಿಶೇಷ ತಜ್ಞರ ತಂಡದೊಂದಿಗೆ ಕೇರಳ ಹೋರಾಟ..!

08:20 PM Jul 12, 2021 | Team Udayavani |

ತಿರುವನಂತಪುರಂ : ಕೇರಳದಲ್ಲಿ ಕೋವಿಡ್ ಸೋಂಕಿನ ನಡುವ ಹೊಸದಾಗಿ ಆತಂಕ ಸೃಷ್ಟಿ ಮಾಡಿದ ಝೀಕಾ ವೈರ್ಸ್ ನ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರದ ವಿಶೇಷ ತಂಡ ಕೇರಳಕ್ಕೆ ಆಗಮಿಸಿದೆ.

Advertisement

ಸದ್ಯ, ಕೇರಳದಲ್ಲಿ 18 ಸಕ್ರಿಯ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಲು ಆರು ಸದಸ್ಯರ ಕೇಂದ್ರ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ.

ತಿರುವನಂತಪುರಂ ಜಿಲ್ಲಾ ವೈದ್ಯಕೀಯ ಅಧಿಕಾರಿ (ಡಿಎಂಒ) ಡಾ. ಶಿನು ಕೆ.ಎಸ್. ಅವರನ್ನು ಒಳಗೊಂಡು ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಇಂದು ಆರಂಭಿಕ ಸಭೆಯನ್ನು ಕೇಂದ್ರ ತಂಡ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಝೀಕಾ ವೈರಸ್‌ ಬಗ್ಗೆ ಎಚ್ಚರವಹಿಸಿ : ಸಾರ್ವಜನಿಕರಲ್ಲಿ ಉಡುಪಿ ಜಿಲ್ಲಾಧಿಕಾರಿ ಮನವಿ

ಇನ್ನು, ಆರಂಭಿಕ ಪ್ರಕರಣಗಳು ವರದಿಯಾದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯ ಸಮೀಪವಿರುವ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಿದ ತಂಡ, ಪ್ರದೇಶದಿಂದ ಸೊಳ್ಳೆ, ಲಾರ್ವಾಗಳನ್ನು ತಪಾಸಣೆಗಾಗಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

Advertisement

ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಶಿನು, ಕೋವಿಡ್ ಸೋಂಕಿನ ನಡುವೆ ಝೀಕಾ ಎಂಬ ಹೊಸ ವೈರಸ್ ಕೇರಳಕ್ಕೆ ಆತಂಕವನ್ನು ಸೃಷ್ಟಿ ಮಾಡಿದೆ ಎಂದಿದ್ದಾರೆ.

ಝೀಕಾ ಕೇರಳಕ್ಕೆ ಹೊಸ ರೋಗ. ಅದನ್ನು ನಿರ್ವಹಿಸುವಲ್ಲಿ ನಮಗೆ ಅನುಭವವಿಲ್ಲ. ನಾವುಈಗಾಗಲೇ ಕೇಂದ್ರ ತಂಡದೊಂದಿಗೆ ಚರ್ಚೆ ನಡೆಸಿದ್ದೇವೆ. ಪ್ರತಿಯೊಂದು ಪ್ರಕರಣವನ್ನು ತಂಡದ ಸದಸ್ಯರಿಗೆ ವಿವರಿಸಲಾಗಿದೆ. ಸೈಟ್ ಮತ್ತು ಸ್ಥಳ, ಎಲ್ಲವನ್ನೂ ಪರಿಶೀಲಿಸಲಾಗಿದೆ ಎಂದಿದ್ದಾರೆ.

ಕೇರಳದಲ್ಲಿ ಕೇಂದ್ರ ತಂಡದ ಉಪಸ್ಥಿತಿ ಮತ್ತು ಸಲಹೆಗಳು ತುಂಬಾ ಮೌಲ್ಯಯುತವಾಗಿವೆ.ಝೀಕಾವನ್ನು ನಿಭಾಯಿಸುವ ಸೂತ್ರವನ್ನು ನಾವು ಇಂದು ಕಂಡುಕೊಂಡಿದ್ದೇವೆ. ಝೀಕಾ ವೈರಸ್ ವಿರುದ್ಧ ಹೋರಾಡಲು ಕೇರಳ ಕೇಂದ್ರ ತಂಡದೊಂದಿಗೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ನಾವು ಪ್ರಾರಂಭಿಸಿದ್ದೇವೆ. ಜಿಲ್ಲಾಡಳಿತವೂ ಆದೇಶಗಳನ್ನು ಹೊರಡಿಸಿದೆ. ಕೇಂದ್ರ ತಂಡದ ತಜ್ಞರು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಅಫ್ಘನ್ ಗೆ ಅಮೆರಿಕದ ಪ್ರಮುಖ ಕಮಾಂಡರ್‌ ವಿದಾಯ : ಅಧಿಕಾರ ಹಸ್ತಾಂತರಿಸಿದ ಜ.ಸ್ಕಾಟ್ ಮಿಲ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next