Advertisement

AIFF: ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ; ಕೇರಳಧ ಅನಿಲ್‌ ಕುಮಾರ್‌ ನೇಮಕ

10:47 PM Jul 20, 2024 | Team Udayavani |

ಹೊಸದಿಲ್ಲಿ: ಅಖಿಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್) ಶನಿವಾರ ಕೇರಳದ ಅನಿಲ್‌ ಕುಮಾರ್‌ ಪ್ರಭಾಕರನ್‌ ಅವರನ್ನು ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Advertisement

ಶಾಜಿ ಪ್ರಭಾಕರನ್‌ ಅವರನ್ನು ವಜಾಗೊಳಿಸಿದ ಬಳಿಕ ಮಧ್ಯಾಂತರ ಆಧಾರ ದಲ್ಲಿ ನೇಮಕಗೊಂಡಿದ್ದ ಎಂ. ಸತ್ಯನಾರಾಯಣ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದ ಬಳಿಕ ಅನಿಲ್‌ ಕುಮಾರ್‌ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಎಐಎಫ್ಎಫ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿಧರಿಸಲಾಯಿತು.

ತಾಂತ್ರಿಕ ಸಮಿತಿಗೆ ಭೂತಿಯ ರಾಜೀನಾಮೆ:

ಫ‌ುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ನೇಮಕ ಮಾಡುವ ವೇಳೆ ಅವಗಣನೆ ಮಾಡಿದ್ದಾರೆ ಎಂದು ಆರೋಪಿಸಿರುವ ಭಾçಚುಂಗ್‌ ಭೂತಿಯ ತಾಂತ್ರಿಕ ಸಮಿತಿಯ ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ತಾಂತ್ರಿಕ ಸಮಿತಿಯ ಚೇರ್ಮನ್‌ ಆಗಿ ರುವ ವೇಳೆ ಕೋಚ್‌ ಆಯ್ಕೆ ಸಂದರ್ಭ ಭಾಗಿಯಾ ಗುತ್ತಿದ್ದೆ. ಕೋಚ್‌ ಹುದ್ದೆಗೆ ಅರ್ಜಿ ಹಾಕಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸುವುದು ತಾಂತ್ರಿಕ ಸಮಿತಿಯ ಕೆಲಸವಾಗಿದೆ. ಆದರೆ ಈ ಬಾರಿ ತಾಂತ್ರಿಕ ಸಮಿತಿಯ ಸಭೆ ನಡೆದಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next