ತಿರುವನಂತಪುರ: ಮುತ್ತು ಕೊಡುವಂತೆ ಬಲವಂತ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ನೆರೆಮನೆಯ ವ್ಯಕ್ತಿಯ ನಾಲಗೆಯನ್ನು ತುಂಡರಿಸಿರುವುದಾಗಿ ಕೇರಳದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೆ ಅಲ್ಲ, ಆ ವ್ಯಕ್ತಿಯ ತುಂಡಾದ ನಾಲಗೆಯನ್ನೂ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ದೂರಿನ ಆಧಾರದಲ್ಲಿ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಹಿಂದೆಯೂ ಈತ ಇಂಥದ್ದೇ ಕೃತ್ಯ ಎಸಗಿದ್ದ ಎಂದಿದ್ದಾರೆ.
ದೂರಿನ ಆಧಾರದಲ್ಲಿ 30ರ ಹರೆಯದ ವ್ಯಕ್ತಿಯ ವಿರುದ್ಧ ಪೊಲೀಸರು ರೇಪ್ ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ. ಹಿಂದೆಯೂ ಈತ ಇಂಥದ್ದೇ ಕೃತ್ಯ ಎಸಗಿದ್ದ ಎಂದಿದ್ದಾರೆ.
ಸೋಮವಾರ ರಾತ್ರಿ ಘಟನೆ ನಡೆದಿದ್ದು, ಅತ್ಯಚಾರಕ್ಕೆ ಯತ್ನಿಸಿದ ವೇಳೆ ಯುವತಿ ನಾಲಿಗೆಯನ್ನು 2 ಸೇ.ಮಿ ನಷ್ಟು ಕತ್ತರಿಸಲಾಗಿದೆ. ಕೂಡಲೆ ಆತ ಆಸ್ಪತ್ರೆಗೆ ತೆರಳಿದ ಆತ ಅಪಘಾತವಾಗಿದೆ ಎಂದು ಚಿಕಿತ್ಸೆ ಪಡೆದುಕೊಳ್ಳಲು ಆರಂಭಿಸಿದ್ದಾನೆ.
ವೈದ್ಯರು ಆತನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದು, ಆತನಿಗೆ ಸಷ್ಟವಾಗಿ ಮಾತನಾಡುವುದು ಇನ್ನು ಮುಂದೆ ಕಷ್ಟ ಸಾಧ್ಯವಾಗಬಹುದು ಎಂದಿದ್ದಾರೆ. ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
2 ತಿಂಗಳ ಹಿಂದೆ 23 ರ ಹರೆಯದ ಕಾನೂನು ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರಕ್ಕೆ ಯತ್ನಿಸಿದ ಸ್ವಾಮೀಜಿಯೊಬ್ಬನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ನಡೆದಿತ್ತು.