Advertisement
ಕೇರಳದ ರೋಗಿಗಳನ್ನು ಮಂಗಳೂರಿಗೆ ಚಿಕಿತ್ಸೆಗೆ ಕರೆತರುವುದಕ್ಕೆ ತಲಪಾಡಿ ಗಡಿಯನ್ನು ತೆರೆಯಬೇಕೆನ್ನುವ ಕೇರಳ ಸರಕಾರದ ನಿರಂತರ ಹೋರಾಟಕ್ಕೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಈ ಮೂವರು ಜನಪ್ರತಿನಿಧಿಗಳು, ಕೇರಳ-ಕರ್ನಾಟಕ ಗಡಿ ತೆರವಿಗೆ ಅವಕಾಶ ನೀಡಲಾರೆವು ಎಂದಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ತಮ್ಮ ಟ್ವೀಟ್‌ನಲ್ಲಿ, “ನಮ್ಮದು ಕೇರಳ ಮಾದರಿ ಎಂದು ದೇಶದ ಎದುರು ಬಡಾಯಿ ಕೊಚ್ಚಿಕೊಂಡ ಕೇರಳ ಸರಕಾರ ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ ಪರ ರಾಜ್ಯವನ್ನು ಅವಲಂಬಿಸಿರುವುದು ದುರಂತ. ಕೋವಿಡ್- 19ದಂತಹ ಮಾರಣಾಂತಿಕ ಕಾಯಿಲೆಯ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ಅದರಲ್ಲಿ ಯಾವ ಅನುಮಾನ ಇಲ್ಲ’ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಬಿಡೆವು
ಶಾಸಕ ವೇದವ್ಯಾಸ್ ಕಾಮತ್ ತಮ್ಮ ಟ್ವೀಟ್‌ನಲ್ಲಿ, “ಪ್ರತಿಯೊಬ್ಬ ನಾಗರಿಕನ ಮೂಲಭೂತ ಆವಶ್ಯಕತೆಗಳಲ್ಲಿ ಆರೋಗ್ಯವೂ ಒಂದು. ಇದಕ್ಕಾಗಿ ಕಾಸರ ಗೋಡು ಭಾಗದ ಜನರು ಮಂಗಳೂರನ್ನು ಅವಲಂಬಿಸಿಕೊಂಡಿದ್ದಾರೆ. ಹಾಗಾದರೆ ಕಾಸರಗೋಡು ಜನರಿಗೆ ನಿಮ್ಮ ಕೊಡುಗೆ ಏನು? ಯಾವುದೇ ಕಾರಣಕ್ಕೂ ಗಡಿ ತೆರೆಯಲು ಅವಕಾಶ ನೀಡಲಾರೆವು’ ಎಂದು ತಿಳಿಸಿದ್ದಾರೆ.
Related Articles
ಶಾಸಕ ಡಾ| ವೈ. ಭರತ್ ಶೆಟ್ಟಿ ಅವರು ಟ್ವೀಟ್‌ನಲ್ಲಿ, “ವೆನಾÉಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶೇ. 50ರಷ್ಟು ಕೋವಿಡ್- 19 ಸೋಂಕಿತ ರೋಗಿಗಳು ಕಾಸರಗೋಡು ಜಿಲ್ಲೆಗೆ ಸೇರಿದವರು. ಕೇರಳ ಮುಖ್ಯಮಂತ್ರಿ ಅವರ ಆಡಳಿತ ವೈಫಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಕಾಸರಗೋಡು ಜಿಲ್ಲೆ ಯೊಂದರಲ್ಲೇ 100ಕ್ಕೂ ಅಧಿಕ ಕೋವಿಡ್- 19 ಸೋಂಕಿತರು ಇದ್ದಾರೆ. ಇದು ಕರ್ನಾಟಕದ ಒಟ್ಟು ಕೋವಿಡ್- 19 ಪ್ರಕರಣಗಳಷ್ಟು ಇವೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮುದಾಯಿಕವಾಗಿ ಕೋವಿಡ್- 19 ಹರಡಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
Advertisement
“ಸೇವ್ ಕರ್ನಾಟಕ’ ಅಭಿಯಾನಮಂಗಳೂರು: ಕರ್ನಾಟಕ ಸರಕಾರವು ಕೇರಳದ ಗಡಿ ರಸ್ತೆಗಳನ್ನು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿ ಟ್ವೀಟರ್‌ನಲ್ಲಿ #SavekarnatakaFromPinarayI ಮತ್ತು #saveKarnataka ಎಂಬ ಅಭಿಯಾನ ಆರಂಭವಾಗಿದೆ. ಈಗಾಗಲೇ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಹ್ಯಾಷ್ ಟ್ಯಾಗ್ ಹಾಕುವ ಮುಖೇನ ಟ್ವೀಟ್ ಮಾಡಿದ್ದಾರೆ. ಕೇರಳ ಹೈಕೋರ್ಟ್ ಆದೇಶ ರದ್ದತಿ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ
ಮಂಗಳೂರು: ಸಂಪೂರ್ಣ ಮುಚ್ಚುಗಡೆ ಆಗಿರುವ ಕರ್ನಾಟಕ ಮತ್ತು ತಮಿಳುನಾಡಿನ ಗಡಿಗಳನ್ನು ತೆರೆದು ಕೇರಳದ ರೋಗಿಗಳನ್ನು ನೆರೆ ರಾಜ್ಯಗಳ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್ ಬುಧವಾರ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಸುಪ್ರೀಂ ಕೋರ್ಟಿನ ವಕೀಲ ಸಂಜಯ್ ನೂಲಿ ಅವರ ಮೂಲಕ ದಾವೆಯನ್ನು ಹೂಡಲಾಗಿದೆ. ಕೇರಳದ ಕಾಸರಗೋಡಿನಲ್ಲಿ ಬುಧವಾರದ ವೇಳೆಗೆ 121 ಕೋವಿಡ್- 19 ಸೋಂಕಿತ ರೋಗಿಗಳಿದ್ದರು. ಸಾವಿರಾರು ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕಾಸರಗೋಡಿನ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಕರೆತರಲು ಆವಕಾಶ ಕಲ್ಪಿಸುವುದು ಮಂಗಳೂರಿನ ಜನರ ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗಾಗಿ ಕೇರಳ ಹೈಕೋರ್ಟಿನ ಆದೇಶವನ್ನು ರದ್ದು ಪಡಿಸಬೇಕು ಎಂದು ಮಿಥುನ್ ರೈ ಅವರು ಮಂಗಳೂರಿನ ಜನರ ಪರವಾಗಿ ದಾವೆ ಅರ್ಜಿಯಲ್ಲಿ ವಿವರಿಸಿದ್ದಾರೆ. ಆನ್‌ಲೈನ್ ಮೂಲಕ ದಾವೆ ಸಲ್ಲಿಸಲಾಗಿದ್ದು, ಒಂದೆರಡು ದಿನಗ ಳಲ್ಲಿ ಸುಪ್ರೀಂ ಕೋರ್ಟು ಈ ಅರ್ಜಿಯನ್ನು ವಿಚಾರಣೆ ಎತ್ತಿಕೊಳ್ಳುವ ನಿರೀಕ್ಷೆ ಇದೆ ಎಂದು ಮಿಥುನ್ ರೈ ತಿಳಿಸಿದ್ದಾರೆ.