Advertisement

ದೇಶದಲ್ಲೇ ಪ್ರಥಮ: ಕೇರಳದಲ್ಲಿ ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿ ಆರಂಭ

04:15 PM Feb 23, 2017 | Team Udayavani |

ತಿರುವನಂತಪುರ : ದೇಶದಲ್ಲೇ ಮೊದಲ ಬಾರಿಗೆ ಕೇರಳ ಸರಕಾರ ಲೈಂಗಿಕ ಅಪರಾಧಿಗಳ ದಾಖಲಾತಿ ಪುಸ್ತಕವನ್ನು (ರಿಜಿಸ್ಟ್ರಿ)ಯನ್ನು ಆರಂಭಿಸಲಿದೆ ಎಂದು ರಾಜ್ಯಪಾಲ ಜಸ್ಟಿಸ್‌ (ನಿವೃತ್ತ) ಪಿ. ಸದಾಶಿವಂ ಹೇಳಿದ್ದಾರೆ. 

Advertisement

ಲೈಂಗಿಕ ಅಪರಾಧಿಗಳ ಈ ರಿಜಿಸ್ಟ್ರಿಯ ಲೈಂಗಿಕ ಅಪರಾಧ ಎಸಗಿದವರ ಎಲ್ಲ ಗುರುತು, ಮಾಹಿತಿ, ವಿವರಗಳನ್ನು ಒಳಗೊಳ್ಳಲಿದೆ ಮತ್ತು ಇದನ್ನು ಸಾರ್ವಜನಿಕ ಅವಲೋಕನಕ್ಕೆ ಉಪಲಬ್ದಗೊಳಿಸ ಲಾಗುವುದು. ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮ ಎನಿಸಲಿದೆ ಮತ್ತು ಇದು ದೇಶದಲ್ಲೇ ಮೊತ್ತ ಮೊದಲನೇಯದ್ದಾಗಲಿದೆ  ಎಂದು ಸದಾಶಿವಂ ಹೇಳಿದರು.

ಕೇರಳದ 14ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮೊದಲ ದಿನದಂದು ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಸದಾಶಿವಂ ಅವರು “ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ಪರಿಹಾರ ನೀಡುವ ನಿಧಿಯೊಂದನ್ನು ಸಿಪಿಐ ಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಆರಂಭಿಸಲಿದೆ ಎಂದು ಹೇಳಿದರು. 

ಮಲಯಾಳಂ ಚಿತ್ರ ನಟಿಯನ್ನು ಆಕೆಯ ಕಾರಿನಲ್ಲೇ ಬಲವಂತವಾಗಿ ಅಪಹರಿಸಿ ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಲಾದ ಘಟನೆಯ ಕೆಲವೇ ದಿನಗಳ ಬಳಿಕದಲ್ಲಿ ಕೇರಳ ಸರಕಾರ ದೇಶದಲ್ಲೇ ಮೊದಲೆಂಬಂತೆ ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿಯನ್ನು ಆರಂಭಿಸುವುದಾಗಿ ಪ್ರಕಟಿಸಿರುವುದು ಗಮನಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next