Advertisement

ಕೇರಳದಲ್ಲೂ ರಾತ್ರಿ ಕರ್ಫ್ಯೂ

07:33 PM Dec 30, 2021 | Team Udayavani |

ತಿರುವನಂತಪುರ: ಹೆಚ್ಚುತ್ತಿರುವ ಒಮಿಕ್ರಾನ್‌ ಭೀತಿ ಕಾರಣದಿಂದ ಹೊಸ ವರ್ಷದ ಸಂಭ್ರಮಾಚರಣೆಯನ್ನು ತಡೆಯುವ ಉದ್ದೇಶದಲ್ಲಿ  ಕೇರಳದಲ್ಲೂ ಗುರುವಾರದಿಂದ ರಾತ್ರಿ ಕರ್ಫ್ಯೂ ಆರಂಭವಾಗಿದ್ದು, ಜ. 2ರ ವರೆಗೆ ಜಾರಿಯಲ್ಲಿರಲಿದೆ. ಆದರೆ ಶಬರಿಮಲೆ ಮತ್ತು ಶಿವಗಿರಿಯಲ್ಲಿ ಇದು ಜಾರಿಯಲ್ಲಿರುವುದಿಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

ಡಿ. 30ರಿಂದ ಜ. 2ರ ವರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ  ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ತುರ್ತು ಕಾರಣ ಹೊರತುಪಡಿಸಿ ಇತರ ಪ್ರಯಾಣಕ್ಕೂ ನಿರ್ಬಂಧ ವಿಧಿಸಲಾಗಿದೆ.  ಅನಿವಾರ್ಯ ಕಾರಣಕ್ಕಾಗಿ ರಾತ್ರಿ ಪ್ರಯಾಣ ಮಾಡಬೇಕಾದವರು ಪೂರಕ ದಾಖಲೆಗಳನ್ನು ಹೊಂದಿರಬೇಕು. ಚರ್ಚ್‌ಗಳು ಸಹಿತ ಯಾವುದೇ ಆರಾಧನಾಲಯಗಳಲ್ಲೂ ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next