ಅಲಪ್ಪುಳ : ಜಿಲ್ಲೆಯಲ್ಲಿ ಅಪರೂಪದ ಮೆದುಳಿನ ಸೋಂಕಿನಿಂದ ಪೀಡಿತ ಹದಿಹರೆಯದ ಹುಡುಗನೊಬ್ಬ ಸಾವನ್ನಪ್ಪಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಹೇಳಿದ್ದಾರೆ.
ಅಲಪ್ಪುಳ ಜಿಲ್ಲೆಯ ಪನವಳ್ಳಿಯ 15 ವರ್ಷದ ಬಾಲಕ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್,ಕಲುಷಿತ ನೀರಿನಲ್ಲಿ ವಾಸಿಸುವ ಸ್ವತಂತ್ರ ಅಮೀಬಾಗಳಿಂದ ಉಂಟಾದ ಕಾಯಿಲೆಯ ಸೋಂಕಿಗೆ ಒಳಗಾಗಿದ್ದ.
ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಬಾಲಕನ ಸಾವನ್ನು ದೃಢಪಡಿಸಿದ ಸಚಿವರು, ರಾಜ್ಯದಲ್ಲಿ ಈ ಮೊದಲು ಐದು ಅಪರೂಪದ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು ಎಂದು ಹೇಳಿದರು. ಮೊದಲನೆಯದು 2016 ರಲ್ಲಿ, ನಂತರ 2019, 20 ಮತ್ತು 22 ರ ವರ್ಷಗಳಲ್ಲಿ ವರದಿಯಾಗಿದ್ದವು.
ಜ್ವರ, ತಲೆನೋವು, ವಾಂತಿ ರೋಗದ ಮುಖ್ಯ ಲಕ್ಷಣಗಳಾಗಿವೆ. ಎಲ್ಲಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಜಾರ್ಜ್ ಹೇಳಿದರು.
ಸ್ವತಂತ್ರವಾಗಿ ಬದುಕುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಮಾನವನ ಮೆದುಳಿಗೆ ಸೋಂಕು ತಗುಲುತ್ತದೆ ಎಂದು ವೈದ್ಯರು ಹೇಳಿದ್ದಾರೆ. ರೋಗದ ತೀವ್ರ ಸ್ವರೂಪವನ್ನು ಪರಿಗಣಿಸಿ, ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.