Advertisement
ಒಟ್ಟು 4,26,469 ಮಂದಿ ಪರೀಕ್ಷೆ ಬರೆದಿದ್ದು 4,23,303 ಮಂದಿ ಉತ್ತೀರ್ಣರಾಗಿದ್ದಾರೆ. 44,363 ಮಂದಿ ಎಲ್ಲ ವಿಷಯಗಳಲ್ಲೂ ಎ+ ಶ್ರೇಣಿ ಗಳಿಸಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಶೇ. 99.48 ಶತಮಾನ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದಲ್ಲಿ 6ನೇ ಸ್ಥಾನ ಪಡೆದ ಜಿಲ್ಲೆಯಾಗಿದೆ. ಜಿಲ್ಲೆಯ 162 ವಿದ್ಯಾಲಯಗಳಿಂದ 10,431 ಬಾಲಕರು, 9,460 ಬಾಲಕಿಯರ ಸಹಿತ 1,639 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ. ಸರಕಾರಿ ವಿದ್ಯಾಲಯಗಳಲ್ಲಿ ಪರೀಕ್ಷೆಗೆ ಬರೆದ 232 ಬಾಲಕರು, ಮತ್ತು 625 ಬಾಲಕಿಯರ ಸಹಿತ 857 ಮಂದಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ.
Related Articles
Advertisement
ಅನುದಾನ ರಹಿತ ಶಾಲೆಗಳಲ್ಲಿ 33 ಬಾಲಕರು ಮತ್ತು 161 ಬಾಲಕಿಯರ ಸಹಿತ 194 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ತೇರ್ಗಡೆ ಹೊಂದಿದ್ದಾರೆ.