ನವ ದೆಹಲಿ : ಕೋವಿಡ್ ಸೋಂಕಿನ ಪ್ರಕರಣಗಳು ಹಾಗ ಝೀಕಾ ಆತಂಕದ ನಡುವೆ ಬಕ್ರಿದ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ಲಾಕ್ ಡೌನ್ ನ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದರ ಬೆನ್ನಿಗೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಮ್ ಎ) ನ ಅಧ್ಯಕ್ಷ ಈ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವುದು ಮತ್ತೊಂದಿಷ್ಟು ವಿವಾದಗಳಿಗೆ ಹಾಗೂ ಸಂಕಷ್ಟಗಳಿಗೆ ಎಡೆಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಬಕ್ರಿದ್ ಹಬ್ಬದ ಸಲುವಾಗಿ ಮೂರು ದಿನಗಳ ಕಾಲ ಕೋವಿಡ್ ಲಾಕ್ ಡೌನ್ ನನ್ನು ಕೇರಳ ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿ ಬಟ್ಟೆ ಅಂಗಡಿಗಳಿಗೆ, ಆಭರಣದಂಗಡಿ, ಫೂಟ್ ವೇರ್ ಗಳಿಗೆ ತೆರೆಯಲು ಆದಿತ್ಯವಾರದಿಂದ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಜನ ಸಂದಣಿ ಸೃಷ್ಟಿಯಾಗಿದ್ದು ಮತ್ತೆ ಆತಂಕ ಉಂಟುಮಾಡಿದೆ.
ಇದನ್ನೂ ಓದಿ : ಫೋನ್ ಕದ್ದಾಲಿಕೆಯನ್ನು ಬಿಜೆಪಿ ಮಾಡುವುದಿಲ್ಲ, ಕಾಂಗ್ರೆಸ್ ಮಾಡುತ್ತದೆ : ಅಶ್ವತ್ಥ್ ನಾರಾಯಣ
ದಿನನಿತ್ಯ ರಾಜ್ಯದಲ್ಲಿ ಹತ್ತು ಸಾವಿರದಿಂದ ಹದಿನೈದು ಸಾವಿರ ಹೊಸ ಸೋಂಕು ದಾಖಲಾಗುತ್ತಿದ್ದು, ಮಾತ್ರವಲ್ಲದೇ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 10ರಷ್ಟಿದ್ದು, ಈ ಸಂದರ್ಭದಲ್ಲಿ ಲಾಕ್ ಡೌನ್ ತೆರವುಗೊಳಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸರ್ಕಾರದ ನಿರ್ಧಾರವನ್ನು ಐಎಮ್ ಎ ಖಂಡಿಸಿದೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ನೊಂದಿಗೆ ಮಾತನಾಡಿದ ಐಡಮ್ಎ ಅಧ್ಯಕ್ಷ ಡಾ. ಜೆ.ಎ ಜಯಲಾಲ್, ಕೇರಳದಲ್ಲಿ ದಿನನಿತ್ಯ 1 ರಿಂದ 15 ಸಾವಿರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೇರಳ ಸರ್ಕಾರ ನಿರ್ಭಂದಗಳನ್ನು ಸಡಿಲಿಕೆ ಮಾಡಿರುವುದ ಸೂಕ್ತವಲ್ಲ. ಕೋವಿಡ್ ಸೋಂಕು ನಿತ್ಯ ಹೆಚ್ಚಳವಾಗುತ್ತಿರುವಾಗ ನಿರ್ಬಂಧಗಳನ್ನು ಇಷ್ಟು ಸಡಿಲಿಕೆ ಮಾಡುವುದು ಅಪಾಯಕಾರಿಯಾಗಿದೆ. ಸಂಪೂರ್ಣ ಲಾಕ್‌ಡೌನ್ ಅನ್ನು ಜಾರಿಗೊಳಿಸಬೇಕು. ಆದರೇ, ನಿರ್ಬಂಧಗಳ ಸಡಿಲಿಕೆ ಮಾಡಿ ಜನರನ್ನು ಬೇಕಾಬಿಟ್ಟಿ ಓಡಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಮತ್ತೆ ಯೋಚನೆ ಮಾಡಬೇಕು. ಯಾವುದೇ ರೀತಿಯ ಸಬೆ ಸಮಾರಂಭಗಳು ವೈರಸ್ ಹರಡುವಿಕೆಗೆ ಮಾರ್ಗವಾಗುತ್ತದೆ ಎಂದಿದ್ದಾರೆ.
ಜುಲೈ 19 ರಂದು ಸುಪ್ರೀಂ ಕೋರ್ಟ್, ಬಕ್ರಿದ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಕೇರಳ ಸರ್ಕಾರದ ವಿರುದ್ಧ ಸಲ್ಲಿಸಿದ ಅರ್ಜಿಯಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಳಿದೆ.
ಇನ್ನು, ಕೋವಿಡ್ ಸೋಂಕಿನ ನಡುವೆಯೂ ಕೇರಳ ಸರ್ಕಾರ ನಿರ್ಬಂದಗಳನ್ನು ಸಡಿಲಿಕೆ ಮಾಡಿರುವುದು ಆಘಾತಕಾರಿ ಎಂದು ಕೂಡ ಸುಪ್ರೀಂ ಹೇಳಿದೆ.
“ಯಾವುದೇ ರೀತಿಯಲ್ಲಿ ಭಾರತದ ನಾಗರಿಕರಿಗೆ ಬದುಕುವ ಹಕ್ಕಿನ ಅತ್ಯಮೂಲ್ಯ ಹಕ್ಕನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ಯಾವುದೇ ಅಹಿತಕರ ಘಟನೆ ನಡೆದರೆ ಯಾವುದೇ ಸಾರ್ವಜನಿಕರು ಅದನ್ನು ನಮ್ಮ ಗಮನಕ್ಕೆ ತರಬಹುದು ಮತ್ತು ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು”ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಇದನ್ನೂ ಓದಿ : ಪಂಜಾಬ್ : ಜುಲೈ 26 ರಿಂದ SSLC, ಪದವಿ ಪೂರ್ವ ಕಾಲೇಜುಗಳ ತರಗತಿಗಳು ಆರಂಭ