Advertisement

Kerala Serial Blasts; ಕೇವಲ 3000 ರೂ ಖರ್ಚಿನಲ್ಲಿ ಬಾಂಬ್ ತಯಾರಿಸಿದ್ದ ಡೊಮಿನಿಕ್!

11:18 AM Oct 31, 2023 | Team Udayavani |

ಕೊಚ್ಚಿ: ಎರಡು ದಿನಗಳ ಹಿಂದೆ ಕೇರಳದ ಕಲಮಶ್ಶೇರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್ ತಾನು ಬಾಂಬ್ ತಯಾರಿಕೆಯನ್ನು ಇಂಟರ್ನೆಟ್ ನಲ್ಲಿ ನೋಡಿ ಕಲಿತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

Advertisement

ತಾನು ಕೇವಲ ಮೂರು ಸಾವಿರ ರೂ. ಖರ್ಚಿನಲ್ಲಿ ಬಾಂಬ್ ತಯಾರಿ ಮಾಡಿದ್ದೆ ಎಂದು 48 ವರ್ಷದ ಮಾರ್ಟಿನ್ ಹೇಳಿಕೊಂಡಿದ್ದಾನೆ.

ಇಲೆಕ್ಟ್ರಿಕ್ ಸರ್ಕಿಟ್ ನಲ್ಲಿ ಪರಿಣಿತನಾಗಿರುವ ಡೊಮಿನಿಕ್ ಮಾರ್ಟಿನ್ ಹಲವು ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿದ್ದ. ಕಳೆದ ಐದು ವರ್ಷಗಳಿಂದ ಮಾರ್ಟಿನ್ ಕುಟುಂಬ ಕೊಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದೆ. ಈತ ಈ ಸ್ಫೋಟ ನಡೆಸಲೆಂದೆ ಎರಡು ತಿಂಗಳ ಹಿಂದೆ ದುಬೈನಿಂದ ವಾಪಾಸ್ ಕೇರಳಕ್ಕೆ ಬಂದಿದ್ದ ಎಂದು ವರದಿ ಹೇಳಿದೆ.

ಸ್ಫೋಟಕ್ಕೆ ಬಳಿಸಿದ ಐಇಡಿಗಳನ್ನು ಕಡಿಮೆ ಗುಣಮಟ್ಟದ ಸ್ಫೋಟಕಗಳಿಂದ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸ್ಪೋಟಕಗಳನ್ನು ಸಾಮಾನ್ಯವಾಗಿ ಪಟಾಕಿಗಳ ತಯಾರಿಕೆಗೆ ಬಳಸಲಾಗುತ್ತದೆ.

ಮೂಲಗಳ ಪ್ರಕಾರ ಮಾರ್ಟಿನ್ ತನ್ನ ಮನೆಯಲ್ಲಿ ಐಇಡಿಗಳನ್ನು ಜೋಡಿಸಿದ್ದಾನೆ. ಯೆಹೋವನ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೊಲ್ಲುವ ಉದ್ದೇಶದಿಂದ ಮಾರ್ಟಿನ್ ಸ್ಫೋಟಕಗಳನ್ನು ಹಾಲ್‌ ನೊಳಗೆ ಇರಿಸಿದ್ದ.

Advertisement

ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಸಂಘಟನೆಯ ಬೋಧನೆಗಳು “ದೇಶದ್ರೋಹಿ” ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಸಮುದಾಯವು ಜನರಿಗೆ, ಮಕ್ಕಳಿಗೆ ಸಹ ತಪ್ಪು ಮೌಲ್ಯಗಳನ್ನು ಕಲಿಸುತ್ತಿದೆ ಎಂದು ಆತ ವೀಡಿಯೊದಲ್ಲಿ ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next