Advertisement

ಕೇರಳ ಜಡಿ ಮಳೆ: 34,000ಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಿಗೆ

03:12 PM Jul 17, 2018 | udayavani editorial |

ತಿರುವನಂತಪುರ : ಕೇರಳದಲ್ಲಿ  ಕಳೆದೊಂದು ವಾರದಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಆವೃತ್ತವಾಗಿದ್ದು  ನಿರಾಶ್ರಿತರಾಗಿರುವ ಸುಮಾರು 34,000 ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 

Advertisement

ಜಡಿಮಳೆಯಿಂದ ಬಾಧಿತವಾದ 8,033 ಕುಟುಂಬಗಳ ಒಟ್ಟು 34,693 ಮಂದಿಯನ್ನು ರಾಜ್ಯಾದ್ಯಂತದ ಸುಮಾರು 265 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ನಿಯಂತ್ರಣ ಕೊಠಡಿ ಮೂಲಗಳು ತಿಳಿಸಿವೆ.

ಕೇರಳ ಮಳೆಗೆ ಈ ತನಕ 12 ಮಂದಿ ಮೃತಪಟ್ಟಿದ್ದು ಇತರ ಆರು ಮಂದಿ ನಾಪತ್ತೆಯಾಗಿದ್ದಾರೆ. ಜು.9ರಿಂದ ಕೇರಳದ ಆದ್ಯಂತ ಮುಂಗಾರು ಮಳೆ ಚುರುಕಾಗಿದೆ. ಎರಡನೇ ಹಂತದ ಮಳೆಯ ತೀವ್ರತೆಗೆ 36 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ; 1,214 ಮನೆಗಳು ಆಂಶಿಕವಾಗಿ ಹಾನಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next