Advertisement

BJP ಸೇರಿದ ಕೇರಳದ ಪಾದ್ರಿ ಚರ್ಚ್ ಸ್ಥಾನದಿಂದ ವಜಾ

04:25 PM Jan 05, 2024 | Team Udayavani |

ಪತ್ತನಂತಿಟ್ಟ: ಸುಮಾರು 50 ಕ್ರಿಶ್ಚಿಯನ್ ಕುಟುಂಬಗಳೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡ ಪ್ರಮುಖ ಆರ್ಥೊಡಾಕ್ಸ್ ಚರ್ಚ್‌ನ ಕೇರಳ ಪಾದ್ರಿ ಫಾದರ್ ಶೈಜು ಕುರಿಯನ್ ಅವರನ್ನು ವಿಚಾರಣೆಯ ಬಾಕಿ ಇಟ್ಟು, ಡಯಾಸಿಸ್‌ನ ಸ್ಥಾನದಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ.

Advertisement

ಕುರಿಯನ್ ಅವರು ಪತ್ತನಂತಿಟ್ಟ ಜಿಲ್ಲೆಯ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂ (ಡಯಾಸಿಸ್) ಕಾರ್ಯದರ್ಶಿಯಾಗಿ ಮತ್ತು ನಿಲಕ್ಕಲ್ ಭದ್ರಾಸನಂ ಭಾನುವಾರ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಡಿ 31 ರಂದು ಫಾ.ಕುರಿಯನ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಕುಟುಂಬಗಳು ಕೇಸರಿ ಪಕ್ಷ ಸೇರ್ಪಡೆಗೊಂಡಿದ್ದರು.
ಶುಕ್ರವಾರ ನಿಲಕ್ಕಲ್ ಭದ್ರಾಸನಂ ಹೊರಡಿಸಿದ ಹೇಳಿಕೆಯ ಪ್ರಕಾರ, ವಿಚಾರಣೆಯ ಬಾಕಿ ಇಟ್ಟು ಎಲ್ಲಾ ಚರ್ಚ್ ಸ್ಥಾನಗಳಿಂದ ಪಾದ್ರಿಯನ್ನು ತಾತ್ಕಾಲಿಕವಾಗಿ ತೆಗೆದುಹಾಕುವ ನಿರ್ಧಾರವನ್ನು ಜನವರಿ 4 ರಂದು ಕರೆದ ಡಯಾಸಿಸ್ ಕೌನ್ಸಿಲ್ ತೆಗೆದುಕೊಳ್ಳಲಾಗಿದೆ.ಆದರೆ, ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹೇಳಿಕೆಯು ಅವರ ವಿರುದ್ಧ ಕ್ರಮಕ್ಕೆ ಕಾರಣವನ್ನು ಸ್ಪಷ್ಟಪಡಿಸಿಲ್ಲ.

ಹೇಳಿಕೆಯ ಪ್ರಕಾರ, ಕುರಿಯನ್ ವಿರುದ್ಧ ಬಂದಿರುವ ದೂರಿನ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗವನ್ನು ನೇಮಿಸುವಂತೆ ಮಲಂಕರ ಆರ್ಥೊಡಕ್ಸ್ ಚರ್ಚ್‌ನ ಸರ್ವೋಚ್ಚ ಮುಖ್ಯಸ್ಥ ಕ್ಯಾಥೋಲಿಕ್ ಬಾವಾ ಅವರನ್ನು ಕೋರಲು ಕೌನ್ಸಿಲ್ ನಿರ್ಧರಿಸಿದೆ. ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next