Advertisement

ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ

01:08 PM Dec 17, 2024 | Team Udayavani |

ತಿರುವನಂತಪುರಂ: ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ ಸೇರಿದ ಪೊಲೀಸ್ ಕಮಾಂಡೋ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ನಲ್ಲಿ ನಡೆದಿದೆ.

Advertisement

ಡಿ.15 ರಂದು ರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ (ಡಿ.16 ರಂದು) ಹೇಳಿದ್ದಾರೆ. ವಯನಾಡು ಮೂಲದ ವಿನೀತ್‌ (35) ಮೃತ ಪೊಲೀಸ್ ಕಮಾಂಡೋ.

ಏನಿದು ಘಟನೆ?:  ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದಲ್ಲಿದ್ದ ವಿನೀತ್‌  ನಕ್ಸಲ್‌ ಚಟುವಟಿಕೆಯನ್ನು ನಿಯಂತ್ರಿಸುವ ಕ್ಯೂಬಿಂಗ್‌ ಆಪರೇಷನ್‌ನಲ್ಲಿ ನಿರತರಾಗಿದ್ದರು. ಗರ್ಭಿಣಿ ಪತ್ನಿ ಜತೆ ಸಮಯ ಕಳೆಯುವ ನಿಟ್ಟಿನಲ್ಲಿ ವಿನೀತ್‌ ಉನ್ನತ ಅಧಿಕಾರಿಗಳೊಂದಿಗೆ ರಜೆ ಬೇಕೆಂದು ಮನವಿ ಮಾಡಿದ್ದ. ಆದರೆ ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದ್ದಾರೆ. ರಜೆಗಾಗಿ 45 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರು. ಆದರೆ ರಜೆ ಸಿಗದಿದ್ದಾಗ ಸರ್ವಿಸ್‌ ರೈಫಲ್‌ ನಿಂದ ಗುಂಡು ಹಾರಿಸಿಕೊಂಡು‌ ವಿನೀತ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆ ನಡೆದ ಕೂಡಲೇ ವಿನೀತ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಕೆಲಸದ ಒತ್ತಡದಿಂದಾಗಿ ಕೇರಳ ಪೊಲೀಸ್‌ ವಿಭಾಗದಲ್ಲಿ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲಲ್ಲ. 90 ಮಂದಿ ಪೊಲೀಸ್‌ ಸಿಬ್ಬಂದಿಗಳು ಇದೇ ರೀತಿಯಾಗಿ ಕೆಲಸದ ಒತ್ತಡದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next