Advertisement

ಕ್ಯಾಂಪಸ್‌ ಒಳಗೆ ಬುರ್ಖಾ ನಿಷೇಧಿಸಿದ ಕೇರಳ ಮುಸ್ಲಿಂ ವಿದ್ಯಾ ಸಂಸ್ಥೆ, ವಿವಾದ

09:51 AM May 04, 2019 | Sathish malya |

ತಿರುವನಂತಪುರ : ಕೇರಳದ ಕೋಯಿಕ್ಕೋಡ್‌ ಮುಸ್ಲಿಂ ಎಜುಕೇಶನ್‌ ಸೊಸೈಟಿ (ಎಂಇಎಸ್‌) ತನ್ನ ವಿದ್ಯಾರ್ಥಿನಿಯರಿಗೆ ಶಾಲಾ ಕ್ಯಾಂಪಸ್‌ ಒಳಗೆ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ.

Advertisement

‘ಯಾವುದೇ ವಿವಾದವನ್ನು ಸೃಷ್ಟಿಸಿದೆ ಎಂಇಎಸ್‌ ಶಿಕ್ಷಣ ಸಂಸ್ಥೆಗಳು 2019-20ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿದ್ಯಾರ್ಥಿಗಳು ಮುಖ ಮುಚ್ಚುವ ಬುರ್ಖಾ ಧರಿಸಿಕೊಂಡು ತರಗತಿಗಳಿಗೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಎಪ್ರಿಲ್‌ 17ರಂದು ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ಎಂಇಎಸ್‌ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪಿ ಕೆ ಫ‌ಝಲ್‌ ಗಫ‌ೂರ್‌ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

‘ಸಾರ್ವಜನಿಕವಾಗಿ ಸ್ವೀಕಾರಾರ್ಹವಲ್ಲದ, ಬೇಕಿದ್ದರೆ ಅದು ಆಧುನಿಕತೆಯ ಹೆಸರಲ್ಲಿರಲಿ ಅಥವಾ ಧಾರ್ಮಿಕ ವಿಧಿವಿಧಾನದ ಹೆಸರಿನಲ್ಲೇ ಇರಲಿ, ಯಾವುದೇ ಉಡುಪು ತೊಡುಪುಗಳನ್ನು ಧರಿಸಿಕೊಂಡು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲಾ ಆವರಣ ಪ್ರವೇಶಿಸಲು ಬಿಡಲಾಗದು’ ಎಂದು ಸುತ್ತೋಲೆ ಹೇಳಿದೆ.

ಹಾಗಿದ್ದರೂ ಎಂಇಎಸ್‌ ನ ಈ ವಸ್ತ್ರ ಸಂಹಿತೆಯು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದೆ; ಮುಖ್ಯವಾಗಿ ಇಸ್ಲಾಮಿಕ್‌ ಸಮೂಹಗಳು ಇದನ್ನು ಆಕ್ಷೇಪಿಸಿವೆ.

ದಾರುಲ್‌ ಉಲೂಮ್‌ ದೇವಬಂದ್‌ ಸಂಸ್ಥೆಯು ಎಂಇಎಸ್‌ನ ಬುರ್ಖಾ ನಿಷೇಧವನ್ನು ಇಸ್ಲಾಮಿಕ್‌ ಕಾನೂನು ವಿರೋಧಿ ಎಂದು ಕರೆದಿದೆ. ಇದು ಶರೀಯತ್‌ಗೆ ವಿರುದ್ಧವಾದುದು ಎಂದು ಅದು ಹೇಳಿದೆ.

Advertisement

ಆದುದರಿಂದ ಎಂಇಎಸ್‌ ಶಿಕ್ಷಣ ಸಂಸ್ಥೆಯು ವ್ಯಕ್ತಿಯ ಮೂಲ ಹಕ್ಕಿನ ಮೇಲೆ ದಾಳಿ ಎಸಗದೆ, ತನ್ನ ಈ ಆದೇಶವನ್ನು ಹಿಂಪಡೆಯಬೇಕು ಎಂದು ದಾರುಲ್‌ ಉಲೂಮ್‌ ದೇವಬಂದ್‌ ನ ಮುಫ್ತಿ ಮೊಹಮ್ಮದ್‌ ಅರ್ಷದ್‌ ಫಾರೂಕಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next