Advertisement

ಆರ್‌ಟಿಇ ಜಾರಿಗೆ ಕೇರಳ ಮಾದರಿ ಅಧ್ಯಯನ

12:13 PM Jun 07, 2017 | Harsha Rao |

ವಿಧಾನ ಪರಿಷತ್ತು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈವರೆಗೆ 1.05 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದ್ದು, ಬಾಕಿ ಉಳಿದ 24,000 ಸೀಟುಗಳನ್ನು ಮೂರನೇ ಸುತ್ತಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಂಚಿಕೆಗೆ ಸೂಚಿಸಲಾಗಿದೆ. ಹಾಗೆಯೇ ಕೇರಳದಲ್ಲಿ ಆರ್‌ಟಿಇ ಜಾರಿ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಲಾಗುವುದು ಎಂದು ಸಚಿವ ತನ್ವೀರ್‌ ಸೇs… ಹೇಳಿದರು.

Advertisement

ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ನಿಯಮ 330ರ ಅಡಿ ಪ್ರಸ್ತಾಪಿಸಿದ ವಿಷಯ ಕುರಿತು ಸದನದಲ್ಲಿ ಮಂಗಳವಾರ 3 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಸುದೀರ್ಘ‌ ಉತ್ತರ ನೀಡಿದ ಸಚಿವ ತನ್ವೀರ್‌ ಸೇs…, “ಆರ್‌ಟಿಇ ಅಡಿ ಅನುದಾನರಹಿತ ಶಾಲೆ ಗಳಲ್ಲಿ ಮಾತ್ರವಲ್ಲದೆ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲೂ ಪ್ರವೇಶಕ್ಕೆ ಅವಕಾಶವಿದೆ. ತಮ್ಮ ಮಕ್ಕಳ ಕಲಿಕೆಗೆ ಅಗತ್ಯವಾದ ಶಾಲೆ ಆಯ್ಕೆ ಪೋಷಕರ ವಿವೇಚನೆಗೆ ಸೇರಿದ್ದಾಗಿದೆ. ಹಾಗಾಗಿ ಆರ್‌ಟಿಇ ಎಂದರೆ ಕೇವಲ ಅನುದಾನರಹಿತ ಶಾಲೆಗಳಲ್ಲಷ್ಟೇ ಪ್ರವೇಶ ಎಂಬಂತಿಲ್ಲ. ಪೋಷಕರು ತಾವು
ಬಯ ಸಿದ ಶಾಲೆಗಳಿಗೆ ಮಕ್ಕಳ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲೇ ಮೊದಲ ಸ್ಥಾನ: ಆರ್‌ಟಿಇ ಕಾಯ್ದೆ ಜಾರಿಗೆ 2014-15ರಲ್ಲಿ 160 ಕೋಟಿ ರೂ., 2015-16ನೇ ಸಾಲಿಗೆ 220 ಕೋಟಿ ರೂ. ಹಾಗೂ 2016-17ನೇ ಸಾಲಿಗೆ 226 ಕೋಟಿ ರೂ. ಅನುದಾನವಷ್ಟೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಕೇಂದ್ರದಿಂದ ಆರ್‌ಟಿಇ ಜಾರಿಗೆ ನಿರೀಕ್ಷಿತ ಅನುದಾನ ಸಿಗದಿದ್ದರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ 7 ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದೆಹಲಿ ಇತರೆ ರಾಜ್ಯಗಳಿವೆ ಎಂದು ತನ್ವೀರ್‌ ಸೇs…ಮಾಹಿತಿ ನೀಡಿದರು.

ಆರ್‌ಎಂಎಸ್‌ಎ ಅಭಿಯಾನದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಹಂಚಿಕೆ ಅನುಪಾತ ಶೇ.40:
ಶೇ.60 ಇರಬೇಕು. ಆದರೆ ಕೇಂದ್ರ ಸರ್ಕಾರ ಶೇ.30ರಷ್ಟು ಅನುದಾನವನ್ನಷ್ಟೇ ನೀಡುತ್ತಿದೆ. ಸರ್ವ ಶಿಕ್ಷಾ ಅಭಿಯಾನದಡಿ ಎಲ್ಲ ರಾಜ್ಯಗಳಿಗೆ ಕೇಂದ್ರ ಹಂಚಿಕೆ ಮಾಡಲು ಒಟ್ಟು 45,000 ಕೋಟಿ ರೂ. ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರವು ಕೇವಲ 23,500 ಕೋಟಿ ರೂ. ಕಾಯ್ದಿರಿ ಸಿದೆ ಎಂದು ಹೇಳಿದರು.

ಗುಣಮಟ್ಟ ಹೆಚ್ಚಿಸಲು ಕ್ರಮ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ
ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಕೇವಲ ಒಬ್ಬ ವಿದ್ಯಾರ್ಥಿಗಳಿರುವ 129 ಶಾಲೆಗಳನ್ನು ಮುಚ್ಚದೆ ಶಿಕ್ಷಕರನ್ನು ನಿಯೋಜಿಸಿ ನಡೆಸಲಾಗುತ್ತಿದೆ. ಈಗಾಗಲೇ 10,400 ಶಿಕ್ಷಕರಿಗೆ ಇಂಗ್ಲಿಷ್‌ ಕಲಿಕಾ ತರಬೇತಿ ನೀಡಲಾಗಿದ್ದು, ಮಕ್ಕಳಿಗೆ ಬೋಧಿಸಲು
ಸಜ್ಜುಗೊಳಿಸಲಾಗಿದೆ. ಹಾಗೆಯೇ 3,600 ಕ್ಲಸ್ಟರ್‌ಗಳಿಗೆ ತಲಾ ಒಬ್ಬ ಮಾಸ್ಟರ್‌ ಟ್ರೈನರ್‌ರನ್ನು ನಿಯೋಜಿಸಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ, ಅಭಿವೃದ್ಧಿಗೆ ಖಾಸಗಿ ಕಂಪನಿಗಳ “ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ’ಯಡಿ ನೆರವು ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next