Advertisement

ಕೋವಿಡ್ 19 ನಿಯಂತ್ರಣಕ್ಕೆ ಕೇರಳ ಮಾದರಿ

10:48 AM Apr 19, 2020 | Suhan S |

ಬೆಂಗಳೂರು: ದೇಶದಲ್ಲಿ ಮೊದಲ ಕೋವಿಡ್ 19 ಪತ್ತೆಯಾದ ಕೇರಳ ರಾಜ್ಯ ಈಗ ನಿಯಂತ್ರಣದಲ್ಲಿದೆ. ಆದರೆ, ಕರ್ನಾಟಕದಲ್ಲಿ ಕೋವಿಡ್ 19  ಸೋಂಕಿತರ ಸಂಖ್ಯೆ ಆರಂಭದಲ್ಲಿ ದಾಖಲಾಗುತ್ತಿದ್ದ ಸಂಖ್ಯೆಗಿಂತ ನಾಲ್ಕೈದು ಪಟ್ಟು ಹೆಚ್ಚಾಗಿದೆ.

Advertisement

ಒಂದಂಕಿ ದಾಟುತ್ತಿಲ್ಲ: ಕೇರಳದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ಆರಂಭದಿಂದ ಪಾಲಿಸಿಕೊಂಡು ಬಂದ ಕಟ್ಟುನಿಟ್ಟಿನ ಕ್ರಮ ಹಾಗೂ ಜನರ ಸಹಕಾರ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಮೊದಲ ಸ್ಥಾನದಲ್ಲಿದ್ದ ಕೇರಳ ಈಗ ಹತ್ತನೇ ಸ್ಥಾನಕ್ಕೆ ಇಳಿದಿದ್ದು, ಪ್ರತಿದಿನ ದಾಖಲಾಗುವ ಸಂಖ್ಯೆ ಒಂದಂಕಿ ದಾಟುತ್ತಿಲ್ಲ. ರಾಜ್ಯದಲ್ಲಿ ಮೊದಲ 50 ಪ್ರಕರಣ ದಾಖಲಾಗಲು 17 ದಿನ ಸಮಯ ತೆಗೆದುಕೊಂಡಿತ್ತು. ಆದರೆ, ಈಗ ಎರಡನೇ ದಿನದಲ್ಲಿ ಸೋಂಕಿತರ ಸಂಖ್ಯೆ 50 ರ ಗಡಿ ದಾಟುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ ಗಳಿಗೆ ಹೋಲಿಸಿ ದರೆ ಕರ್ನಾಟಕದಲ್ಲಿ ಕೋವಿಡ್‌ ನಿಯಂತ್ರಣ ಪ್ರಮಾಣ ಉತ್ತಮವಾಗಿದೆ.

ಬೇಗ ಎಚ್ಚೆತ್ತುಕೊಂಡಿರುವುದು: ಕೇರಳ ಸರ್ಕಾರ ಫೆಬ್ರವರಿಯಲ್ಲಿಯೇ ಹೊರ ದೇಶಗಳಿಂದ ಬಂದವರನ್ನು ತಪಾಸಣೆ ಮಾಡಿ ಹೋಮ್‌ ಕ್ವಾರಂಟೈನ್‌ ಮಾಡಿತು. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿಯೂ ಎರಡು ಕೋವಿಡ್‌ ಆಸ್ಪತ್ರೆ, ಸಂಚಾರಿ ಕೋವಿಡ್ 19 ಚಿಕಿತ್ಸಾ ಘಟಕ, ತಜ್ಞ ವೈದ್ಯರ ನೇಮಕ ಮಾಡಿ ಕೊಂಡು ತಪಾಸಣೆ ಪ್ರಮಾಣವನ್ನು ಹೆಚ್ಚಿಸಲಾಯಿತು. ಅಲ್ಲದೇ ಕೋವಿಡ್ 19  ನಿಯಂತ್ರಣಕ್ಕೆ ಸುಮಾರು 20 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿತು. ನಿಯಮ ಪಾಲನೆ ನಿರ್ಲಕ್ಷ್ಯ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಳ್ಳುವ ಮೊದಲು ವಿದೇಶದಿಂದ ಬಂದವ ರನ್ನು ಸಂಪೂರ್ಣ ಪತ್ತೆ ಹಚ್ಚಿ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡಿಸದೆ ನಿರ್ಲಕ್ಷ್ಯ ವಹಿಸಿರುವುದು, ತಬ್ಲೀ  ಜಮಾತೆ ಸಮಾವೇಶದಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಲು ವಿಳಂಬ ಅನುಸರಿಸುತ್ತಿರುವುದು ರಾಜ್ಯದಲ್ಲಿ 2ನೇ ಹಂತದ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ತಪಾಸಣೆ ಪ್ರಮಾಣ ಹೆಚ್ಚಾದರೆ ಪ್ರತಿದಿನ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next