Advertisement

ಪ್ರವಾಹದ ಬಗ್ಗೆ ಕೀಳು ಕಮೆಂಟ್ ಮಾಡಿ ಗಲ್ಫ್ ನಲ್ಲಿ ಕೆಲಸ ಕಳೆದುಕೊಂಡ!

01:15 PM Aug 20, 2018 | Sharanya Alva |

ದುಬೈ:ವರುಣನ ರೌದ್ರಾವತಾರಕ್ಕೆ ಸಿಲುಕಿ ನಲುಗಿ ಹೋಗಿದ್ದ ಕೇರಳದ ಪ್ರವಾಹ ಪೀಡಿತ ಸಂತ್ರಸ್ತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ಕಮೆಂಟ್ ಮಾಡಿದ್ದ ಕೇರಳದ ವ್ಯಕ್ತಿಯೊಬ್ಬನಿಗೆ ಗಲ್ಫ್ ಕಂಪನಿಯೊಂದು ಗೇಟ್ ಪಾಸ್ ಕೊಟ್ಟಿದೆ!

Advertisement

ಕೇರಳ ಮೂಲದ ರಾಹುಲ್ ಚೇರು ಪಾಲಾಯಟ್ಟು ಒಮಾನ್ ನ ಲುಲು ಗ್ರೂಪ್ ಇಂಟರ್ ನ್ಯಾಶನಲ್ ನ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕಂಪನಿ ರಾಹುಲ್ ನನ್ನು ಕೆಲಸದಿಂದ ವಜಾ ಮಾಡಿದೆ.

ಏನದು ಕಮೆಂಟ್:

ಕೇರಳದ ಪ್ರವಾಹ ಸಂತ್ರಸ್ತರಿಗೆ ಸ್ಯಾನಿಟೇಶನ್(ನ್ಯಾಪ್ಕಿನ್ ಸೇರಿದಂತೆ ನೈರ್ಮಲ್ಯ ಸಂಬಂಧಿ) ವಸ್ತುಗಳ ಅಗತ್ಯವಿದೆ ಎಂಬ ಮನವಿಯನ್ನು ರಾಹುಲ್ ತನ್ನ ಫೇಸ್ ಬುಕ್ ನಲ್ಲಿ ಅಣಕಿಸಿ ಕಮೆಂಟ್ ಹಾಕಿರುವುದಾಗಿ ದುಬೈ ಮೂಲದ ಖಾಲೀಜ್ ಟೈಮ್ಸ್ ವರದಿ ಮಾಡಿದೆ.

ರಾಹುಲ್ ಕಮೆಂಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ವಿಷಯ ತಿಳಿದ ದುಬೈ ಕಂಪನಿ ಎಚ್ ಆರ್ ಮ್ಯಾನೇಜರ್ ರಾಹುಲ್ ಗೆ ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

“ ಕೇರಳದ ಪ್ರವಾಹ ಪರಿಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕೀಳುಮಟ್ಟದ ಕಮೆಂಟ್ ನ ಹಿನ್ನೆಲೆಯಲ್ಲಿ ನಿಮ್ಮನ್ನು ತಕ್ಷಣಕ್ಕೆ ಜಾರಿಯಾಗುವಂತೆ ಕೆಲಸದಿಂದ ವಜಾ ಮಾಡಲಾಗಿದೆ. ಕೂಡಲೇ ನಿಮ್ಮ ರಿಪೋರ್ಟಿಂಗ್ ಮ್ಯಾನೇಜರ್ ಗೆ ಕಚೇರಿ ನಿರ್ವಹಣೆಯ ಎಲ್ಲಾ ಜವಾಬ್ದಾರಿಗಳನ್ನು ವರ್ಗಾಯಿಸಿ, ಅಕೌಂಟ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಫೈನಲ್ ಸೆಟಲ್ ಮೆಂಟ್ ಮಾಡಿಕೊಂಡು ಹೋಗಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಕ್ಷಮೆ ಕೇಳಿದ ರಾಹುಲ್:

ತನ್ನ ಕಮೆಂಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ರಾಹುಲ್ ಶನಿವಾರ ಫೇಸ್ ಬುಕ್ ನಲ್ಲಿ ಮತ್ತೊಂದು ವಿಡಿಯೋ ಫೋಸ್ಟ್ ಮಾಡಿ..ನನ್ನ ತಪ್ಪಿಗೆ ಕ್ಷಮೆ ಇರಲಿ. ನನ್ನ ಕಮೆಂಟ್ ನಿಂದ ನೋವಾಗಿದ್ದರೆ ಕ್ಷಮಿಸಿ..ನಾನು ಆ ಕಮೆಂಟ್ ಹಾಕಿರುವ ವೇಳೆ ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೇನೆಂಬ ಅರಿವು ಇರಲಿಲ್ಲವಾಗಿತ್ತು ಎಂದು ತಿಳಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next