Advertisement

Abu Dhabi; ಪಾನಮತ್ತನಾಗಿ ವಿಮಾನದಲ್ಲಿ ಗದ್ದಲ: ಕೇರಳದ ವ್ಯಕ್ತಿ ಬಂಧನ

08:10 PM Jun 19, 2023 | Team Udayavani |

ಅಬುಧಾಬಿ: ಇಲ್ಲಿನ ವಿಮಾನದಲ್ಲಿ ಮದ್ಯದ ಅಮಲಿನಲ್ಲಿ ಗದ್ದಲವನ್ನು ಮಾಡಿದ್ದಕ್ಕಾಗಿ ಕೇರಳ ಮೂಲದ 51ವರ್ಷದ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಆರೋಪಿಯನ್ನು ಜಿಜಾನ್ ಜಾಕೋಬ್ ಎಂದು ಗುರುತಿಸಲಾಗಿದ್ದು,ಸೋಮವಾರ ಬೆಳಗ್ಗೆ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಬಂಧಿಸಲಾಗಿದೆ.

ಏರ್‌ಲೈನ್ ಸಿಬಂದಿ ನೀಡಿದ ದೂರಿನ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಸಹ-ಪ್ರಯಾಣಿಕರು ಮತ್ತು ಸಿಬಂದಿಗಳೊಂದಿಗೆ ಕೆಲವು ಸಣ್ಣ ವಿಷಯಕ್ಕೆ ಜಗಳವಾಡಿದ”ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಎ) ಅಡಿಯಲ್ಲಿ ಜಾಕೋಬ್ ಬಂಧನವನ್ನು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ನೆಡುಂಬಸ್ಸೆರಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next