Advertisement
ಗುಂಡ್ಲುಪೇಟೆ ಪಟ್ಟಣ, ಬೇಗೂರು, ತೆರಕಣಾಂಬಿ, ಹಂಗಳ ಹೋಬಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂತೆಗಟ್ಟಲೆ ವಿವಿಧ ಮುಖ ಬೆಲೆಯ ಲಾಟರಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅನೇಕ ಮಂದಿ ಕೆಲಸ ಬಿಟ್ಟು ಲಾಟರಿ ಗೀಳಿಗೆ ಬಿದ್ದು, ಸಾಲ ಮಾಡಿ ಲಾಟರಿ ತೆಗೆದುಕೊಳ್ಳುತ್ತಿದ್ದಾರೆ. ಅಪರೂಪಕ್ಕೊಮ್ಮೆ ಐನೂರು ಸಾವಿರ ರೂಪಾಯಿ ಲಾಟರಿ ಹೊಡೆಯುವುದಕ್ಕೆ ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಪ್ರತಿದಿನ ಹಣ ಕಳೆದುಕೊಳ್ಳತ್ತಾರೆ. ಇನ್ನೂ ಈ ಮಧ್ಯೆ ಕೆಲವರು ಲಾಭದ ಆಸೆಗಾಗಿ ಲಾಟರಿ ಮಾರಾಟದಲ್ಲಿ ತೊಡಗಿದ್ದಾರೆ.
Related Articles
Advertisement
ಪೊಲೀಸ್ ಗುಪ್ತ ಮಾಹಿತಿ ಸಿಬ್ಬಂದಿ ವೈಫಲ್ಯ : ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹೋಬಳಿ ಭಾಗದಲ್ಲಿ ಅಕ್ರಮ ಲಾಟರಿ ಮಾರಾಟದ ಬಗ್ಗೆ ಪೊಲೀಸರು ಹಾಗೂ ಗುಪ್ತ ಮಾಹಿತಿ ಸಿಬ್ಬಂದಿಗೆ ಮಾಹಿತಿ ಇದ್ದರೂ ಸಹ ತಡೆಗೆ ಕ್ರಮ ವಹಿಸಿಲ್ಲ. ಇದನ್ನು ಗಮನಿಸಿದರೆ ಪರೋಕ್ಷವಾಗಿ ಅವರೇ ಲಾಟರಿ ಮಾರಾಟಕ್ಕೆ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನ ಬರುತ್ತದೆ ಎಂದು ಸಾರ್ವಜನಿಕರು ದೂರಿದರು. ಹಿಂದೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಇದ್ದ ಗುಪ್ತ ಮಾಹಿತಿ ಸಿಬ್ಬಂದಿ ಲಾಟರಿ ಮಾರಾಟ ಮಾಡುವ ಅನೇಕ ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ ಕಳೆದೊಂದು ವರ್ಷಗಳಿಂದ ಎಗ್ಗಿಲ್ಲದೆ ಲಾಟರಿ ಮಾರಾಟ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಲಾಟರಿ ಮಾರಾಟ ಮಾಡುವವರನು ಬಂಧಿಸಿ ಸುಮ್ಮನಾಗುತ್ತಿದ್ದಾರೆ.
ಕೇರಳ ಲಾಟರಿ ಮಾರಾಟ ಸಂಬಂಧ ಕಳೆದ ತಿಂಗಳು ನಾಲ್ಕೆçದು ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಚನೆ ನೀಡಿ ಕ್ರಮ ವಹಿಸಲಾಗುವುದು. -ಪ್ರಿಯದರ್ಶಿನಿ ಸಾಣೆಕೊಪ್ಪ, ಡಿವೈಎಸ್ಪಿ, ಚಾ.ನಗರ
– ಬಸವರಾಜು ಎಸ್.ಹಂಗಳ