ಹೈದರಾಬಾದ್ : ವಿವಾದಿತ ಇಸ್ಲಾಮಿಕ್ ಬೋಧಕ ಮತ್ತು ಪೀಸ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಎಂ ಎಂ ಅಕ್‌ಬರ್ ಅವರನ್ನು ನಿನ್ನೆ ಭಾನುವಾರ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
ಕೊಚ್ಚಿಯಲ್ಲಿನ ತನ್ನ ಶಾಲೆಯಲ್ಲಿ ಮಕ್ಕಳ ಪಠ್ಯ ಪುಸ್ತಕದಲ್ಲಿ ಕೋಮು ದ್ವೇಷ ವಿಷಯಗಳನ್ನು ತುಂಬಿದ ಕಾರಣಕ್ಕೆ ಅಕ್‌ಬರ್ ಅವರು ಪೊಲೀಸರಿಗೆ ಬೇಕಾಗಿದ್ದರು.
ಅಕ್‌ಬರ್ ಅವರು ತಮ್ಮ ಮೇಲೆ ಕೇಸು ದಾಖಲಾದೊಡನೆಯೇ ಪಶ್ಚಿಮ ಏಶ್ಯಕ್ಕೆ ಪಲಾಯನ ಮಾಡಿದ್ದರು. ಈತ ಇಸ್ಲಾಂ ಪ್ರಚಾರ ಮಾಡುವ ‘Niche of Truth’ ಸಂಘಟನೆಯ ಸ್ಥಾಪಕ ನಿರ್ದೇಶಕರಾಗಿದ್ದರು ಎಂದು ಪೊಲೀಸರು ಹೇಳಿರುವುದನ್ನು “ದಿ ಇಂಡಿಯನ್ ಎಕ್ಸ್‌ಪ್ರೆಸ್” ವರದಿ ಮಾಡಿದೆ.
ಅಕ್‌ಬರ್ ಅವರನ್ನು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳ-ವಲಸೆ ಅಧಿಕಾರಿಗಳು ಬಂಧಿಸಿದರು.