Advertisement

ಕೋವಿಡ್ ವಾರ್ಡ್ ನಲ್ಲೇ ನಡೆಯಿತು ಕಲ್ಯಾಣ: ಪಿಪಿಇ ಕಿಟ್ ಧರಿಸಿ ಬಂದ ಮದುಮಗಳು!

05:17 PM Apr 25, 2021 | Team Udayavani |

ಕೊಚ್ಚಿನ್: ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣ ಕರ್ಫ್ಯೂ ವಿಧಿಸಲಾಗುತ್ತಿದ್ದು, ಸಭಾಭವನದಲ್ಲಿ ನಡೆಯುತ್ತಿದ್ದ ಮದುವೆಗಳು ಮನೆಯಂಗಳದಲ್ಲೇ ನಡೆಯುವಂತಾಗಿದೆ. ಆದರೆ ಇಲ್ಲೊಂದು ಜೋಡಿ ಕೋವಿಡ್ ಸೆಂಟರ್ ವಾರ್ಡ್ ನಲ್ಲೇ ಮದುವೆಯಾಗಿದ್ದಾರೆ,

Advertisement

ಕೇರಳದ ಅಲಪ್ಪುವಿನ ಮೆಡಿಕಲ್ ಕಾಲೇಜಿನಲ್ಲಿ ಈ ಅಪರೂಪದ ವಿವಾಹ ನಡೆದಿದೆ. ಶರತ್ ಮತ್ತು ಅಭಿರಾಮಿ ಕೋವಿಡ್ ವಾರ್ಡ್ ನಲ್ಲಿಯೇ ವಿವಾಹ ಬಂಧನಕ್ಕೆ ಒಳಗಾದರು.

ಮದುವೆ ಗಂಡು ಶರತ್ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಮದುವೆಗೆ ತಯಾರಿಯಲ್ಲಿದ್ದಾಗ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಬಳಿಕ ಅವರ ತಾಯಿಗೂ ಕೋವಿಡ್ ದೃಢವಾಗಿತ್ತು. ಅವರಿಬ್ಬರೂ ಅಲಪ್ಪುವಿನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲಾಧಿಕಾರಿ ಸೇರಿದಂತೆ ಇತರ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದ ಕುಟುಂಬ ಕೋವಿಡ್ ವಾರ್ಡ್ ನಲ್ಲಿಯೇ ಮದುವೆ ನಡೆಸಿದೆ. ಮದುಮಗಳು ಮತ್ತು ಆಕೆಯ ಸಂಬಂಧಿಕರು ಪಿಪಿಇ ಕಿಟ್ ಧರಿಸಿ ಬಂದಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next