Advertisement

ಜನನಾಂಗ ಮರು ಜೋಡಣೆ’

06:20 AM Oct 06, 2017 | Team Udayavani |

ಮಲಪ್ಪುರಂ: ತುಂಡಾಗಿರುವ ಮಾನವ ಜನನಾಂಗವನ್ನು ಮತ್ತೆ ಜೋಡಿಸಲು ಸಾಧ್ಯವೇ? ಕೇರಳದ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಇಂಥದ್ದೊಂದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಅದಕ್ಕೆ ಬರೋಬ್ಬರಿ ಎಂಟು ತಾಸುಗಳು ತಗುಲಿವೆ. 

Advertisement

ಕಳೆದ ತಿಂಗಳು ಕುಟ್ಟಿಪುರಂನ ಲಾಡ್ಜ್ ಒಂದರಲ್ಲಿ ಇಶಾìದ್‌ ಎಂಬ 26ರ ಹರೆಯದ ಯುವಕ ಮತ್ತು ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾತಿನ ವರಸೆ ಅತಿರೇಕಕ್ಕೆ ಹೋದಾಗ ಕೋಪಗೊಂಡ ಮಹಿಳೆ, ಇಶಾìದ್‌ನ ಮರ್ಮಾಂಗದ ಮುಕ್ಕಾಲು ಭಾಗವನ್ನು ತುಂಡರಿಸಿದ್ದರು. ಈ ಸಂಬಂಧ ಸೆ.21ರಂದು ಇಶಾìದ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಸ್ಥೆಯ  ಪ್ಲಾಸ್ಟಿಕ್‌ ಮತ್ತು ಮರುಜೋಡಣೆ ವಿಭಾಗದ ಹಿರಿಯ ವೈದ್ಯ ಡಾ.ಕೃಷ್ಣಕುಮಾರ್‌ ನೇತೃತ್ವದ ತಜ್ಞರ ತಂಡ ವಾರದ ಹಿಂದೆ ಶಸ್ತ್ರಚಿಕಿತ್ಸೆ ಕೈಗೊಂಡು, ಜನನಾಂಗವನ್ನು ಮರುಜೋಡಣೆ ಮಾಡಿದೆ. 

“ಇಂಥ ಸರ್ಜರಿ ವೇಳೆ ತುಂಡಾದ ಜನನಾಂಗದ ಪ್ರತಿಯೊಂದು ಸಂಕೀರ್ಣ ಭಾಗಗಳ ಮರು ಜೋಡಣೆ ಅಗತ್ಯವಿರುತ್ತದೆ. ಈ ಪ್ರಕರಣದಲ್ಲಿ ತುಂಡಾದ ಅಂಗದ ಅಪಧಮನಿ, ರಕ್ತನಾಳಗಳು, ನರಗಳು, ಮೂತ್ರನಾಳ ಹಾಗೂ ಸ್ನಾಯುಗಳನ್ನು ನಾವು ಯಶಸ್ವಿಯಾಗಿ ಮರು ಜೋಡಣೇ ಮಾಡಿದ್ದೇವೆ,’ ಎಂದು ಡಾ.ಕೃಷ್ಣಕುಮಾರ್‌ ಹೇಳಿದ್ದಾರೆ.

ಅಂದಹಾಗೆ ಆರಂಭದಲ್ಲಿ ತಾನೇ ಜನನಾಂಗ ಕತ್ತರಿಸಿಕೊಂಡಿರುವುದಾಗಿ ಇಶಾìದ್‌ ಹೇಳಿದ್ದ. ಆದರೆ ಆತನ ಮರ್ಮಾಂಗಕ್ಕೆ ಮರ್ಮಾಘಾತ ಮಾಡಿರುವುದು ಆತನ ಸಿಕ್ರೆಟ್‌ ಪತ್ನಿ ಎಂದು ವಿಚಾರಣೆ ವೇಳೆ ತಿಳಿದುಬಬಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next