Advertisement
ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಮಧ್ಯ ರಾತ್ರಿಯ ಬಳಿಕವೂ ಪಟಾಕಿ ಸಿಡಿಸುತ್ತಿರುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಮತ್ತು ಇದನ್ನು ತಡೆಗಟ್ಟಲು ನಿರ್ದೇಶನ ಕೋರಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ಮನವಿಯನ್ನು ನ್ಯಾ| ಅಮಿತ್ ರಾವಲ್ ನೇತೃತ್ವದ ನ್ಯಾಯಪೀಠ ಪುರಸ್ಕರಿಸಿದೆ. ಹೀಗಾಗಿ ಕೇರಳದ ಎಲ್ಲ ಜಿಲ್ಲಾಡಳಿತಗಳೂ ಧಾರ್ಮಿಕ ಕ್ಷೇತ್ರಗಳಲ್ಲಿ ಶೋಧ ನಡೆಸಿ, ಅಕ್ರಮವಾಗಿ ಸಂಗ್ರಹಿ ಸಿರುವ ಪಟಾಕಿಗಳನ್ನು ವಶಪಡಿಸಿಕೊಂಡು ಪಟಾಕಿ ಸಿಡಿಸದಂತೆಯೂ ಸೂಚನೆ ನೀಡ ಬೇಕು. ಯಾವುದೇ ಧರ್ಮಗ್ರಂಥವೂ ಪಟಾಕಿ ಸಿಡಿಸಿ ದೇವರನ್ನು ಪ್ರಸನ್ನಗೊಳಿಸಿ ಎಂದಿಲ್ಲವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Advertisement
Kerala High Court ಅಕ್ರಮ ಪಟಾಕಿ: ದಾಳಿಗೆ ಸೂಚನೆ
11:46 PM Nov 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.