Advertisement

ಚಾನೆಲ್‌ಗೆ ನಿರ್ಬಂಧ ಸರಿ: ಕೇರಳ ಹೈಕೋರ್ಟ್‌

09:50 PM Feb 08, 2022 | Team Udayavani |

ಕೊಚ್ಚಿ: ಮಲಯಾಳಂ ಸುದ್ದಿವಾಹಿನಿ “ಮೀಡಿಯಾ ವನ್‌’ ವಿರುದ್ಧ ಕೇಂದ್ರ ಸರ್ಕಾರ ಹೇರಿದ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಹೀಗಾಗಿ, ಸುದ್ದಿವಾಹಿನಿ ತನ್ನ ಪ್ರಸಾರ ಸ್ಥಗಿತಗೊಳಿಸಿದೆ. ನ್ಯಾ.ಎನ್‌.ನಗರೇಶ್‌ ನೇತೃತ್ವದ ನ್ಯಾಯಪೀಠ ಈ ಬಗ್ಗೆ ತೀರ್ಪು ನೀಡಿ, ಕೇಂದ್ರ ಗೃಹ ಸಚಿವಾಲಯ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೆಲ ದಿನಗಳ ಅವಕಾಶ ನೀಡುವಂತೆ ಮಾಡಿದ ಕೋರಿಕೆಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ:ಓಪೋ ರೆನೊ 7 ಪ್ರೋ 5ಜಿ ಮಾರುಕಟ್ಟೆಗೆ; ಎರಡು ಬಣ್ಣಗಳ ಆಯ್ಕೆ

ರಾಷ್ಟ್ರದ ಭದ್ರತಾ ಹಿತಾಸಕ್ತಿ ಒಳಗೊಂಡಿರುವುದರಿಂದ ಕೇಂದ್ರ ಸರ್ಕಾರ ಸರಿಯಾಗಿಯೇ ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು, ಚಾನೆಲ್‌ ಮೇಲಿನ ನಿರ್ಬಂಧ ಕ್ರಮ ಸರಿ ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next