Advertisement

ಅಯ್ಯಪ್ಪನ ಮುಂದೆ ಎಲ್ಲರೂ ಸಾಮಾನ್ಯ ಭಕ್ತರೇ.. ಹೆಲಿಕಾಪ್ಟರ್‌, ವಿಐಪಿ ಸೇವೆಗೆ ಕೇರಳ ಹೈಕೋರ್ಟ್‌ ನಿರ್ಬಂಧ

09:20 AM Dec 07, 2022 | Team Udayavani |

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್‌ ನೀಡುವ ಸಂಸ್ಥೆಗಳಿಗೆ ಕೇರಳ ಹೈಕೋರ್ಟ್‌ ಮಂಗಳವಾರ(ಡಿ.6 ರಂದು) ನಿರ್ಬಂಧ ಹೇರಿ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದೆ.

Advertisement

ಹೈಕೋರ್ಟಿನ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದ್ದು, ನಿಲಕ್ಕಲ್‌ ತಲುಪಿದ ಬಳಿಕ ಪ್ರತಿಯೊಬ್ಬ ಭಕ್ತನೂ ಅಯ್ಯಪ್ಪನ ಸಾಮಾನ್ಯ ಭಕ್ತನಾಗುತ್ತಾನೆ. ಅಲ್ಲಿ ಆತ ಯಾವುದೇ ವಿಶೇಷ ವಿಐಪಿ ಸೇವೆಗಳ ಬೇಡಿಕೆ ಇಡುವುದಿಲ್ಲ. ಆದರಿಂದ ಯಾರಿಗೂ ಅಲ್ಲಿ ವಿಶೇಷ ಸೇವೆಯನ್ನು ನೀಡಬಾರದೆಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.

ವಿಐಪಿ ಭೇಟಿಯ ಹೆಸರಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಒದಗಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಗದ್ದೆಯಲ್ಲಿ ಆಡುವಾಗ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 8 ವರ್ಷದ ಬಾಲಕ

ಕೆಲ ದಿನಗಳ ಹಿಂದೆ ಎನ್‌ಹಾನ್ಸ್ ಏವಿಯೇಷನ್ ​​ಎಂಬ ಖಾಸಗಿ ಸಂಸ್ಥೆಯು ಎರ್ನಾಕುಲಂನಿಂದ ಶಬರಿಮಲೆಗೆ ಹೆಲಿಕಾಪ್ಟರ್ ಸೇವೆಯನ್ನು ನೀಡುವ ವಾಣಿಜ್ಯ ಜಾಹೀರಾತನ್ನು ಪ್ರಕಟಿಸಿತ್ತು. ಇದರ ವಿರುದ್ಧ ಸುಮೋಟೋ ಕೇಸ್ ದಾಖಲಾಗಿತ್ತು.

Advertisement

ಈ ಕುರಿತು ಸರ್ಕಾರ ಹಾಗೂ ಖಾಸಗಿ ವಿಮಾನಯಾನ ಕಂಪೆನಿಯಿಂದ ವಿವರಣೆ ನೀಡಿದ ಬಳಿಕ ಕೋರ್ಟ್‌ ಈ ಆದೇಶವನ್ನು ನೀಡಿದೆ.

ಏವಿಯೇಷನ್ ​​ಸರ್ವಿಸಸ್ ಲಿಮಿಟೆಡ್ ಕಂಪೆನಿ ʼಹೆಲಿಕೇರಳ.ಕಾಂʼ ವೆಬ್‌ ಸೈಟ್‌ ನಲ್ಲಿ ಶಬರಿಮಲೆ ಯಾತ್ರಿಗಳಿಗೆ ವಿಮಾನಯಾನ ಸೇವೆಯ ಜಾಹೀರಾತನ್ನು ಇತ್ತೀಚೆಗೆ ನೀಡಿತ್ತು.

ತಾವು ಯಾವುದೇ ಹೆಲಿಕಾಪ್ಟರ್‌ ಸೇವೆ ಬಳಕೆಗೆ ಅವಕಾಶ ನೀಡಿಲ್ಲ ಎಂದು ಕೋರ್ಟಿಗೆ ಆದೇಶದ ಮೊದಲು ಟಿಡಿಬಿ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next