Advertisement

ಮೋದಿ ಫೋಟೋ ಇದ್ರೆ ಏನು ತೊಂದರೆ? –ಕೇರಳ ಹೈಕೋರ್ಟ್‌

10:29 AM Dec 14, 2021 | Team Udayavani |

ಕೇರಳ: ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಕಿರುವುದನ್ನು ಖಂಡಿಸಿ, ಕೇರಳ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಫೋಟೋ ಇದ್ದರೆ ನಿಮಗೇನು ತೊಂದರೆ ಎಂದು ಪ್ರಶ್ನಿಸಿದೆ.

Advertisement

ಅರ್ಜಿದಾರರು, ಜವಹರಲಾಲ್‌ ನೆಹರು ಇನ್‌ಸ್ಟಿಟ್ಯೂಟ್‌ನಲ್ಲಿ ವೃತ್ತಿಯಲ್ಲಿರುವ ವಿಚಾರವನ್ನು ತೆಗೆದ ನ್ಯಾಯ ಮೂರ್ತಿ ಪಿ.ವಿ.ಕುಞಕೃಷ್ಣನ್‌, “ಇನ್‌ಸ್ಟಿಟ್ಯೂಟ್‌ಗಳಿಗೆ ಮಾಜಿ ಪ್ರಧಾನಿ ನೆಹರು ಹೆಸರಿಡುವುದು ತಪ್ಪಲ್ಲವೆಂದಮೇಲೆ, ಲಸಿಕೆ ಪ್ರಮಾಣ ಪತ್ರ ಗಳಲ್ಲಿ ಮೋದಿ ಫೋಟೋ ಬಳಸುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:- ಜಿಂಕೆ ಬೇಟೆಯಾಡಿದ ಮೂವರ ಬಂಧನ: ಚಾರ್ಲಿ(ಶ್ವಾನ)ಯ ಪ್ರಥಮ ಬೇಟೆ ಸಕ್ಸಸ್

ಬೇರೆ ರಾಷ್ಟ್ರಗಳ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೋವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದು, ಅದಕ್ಕೆ ನ್ಯಾಯಾಲಯ “ಅವರಿಗೆ ಪ್ರಧಾನಿ ಬಗ್ಗೆ ಹೆಮ್ಮೆಯಿಲ್ಲ. ನಮ್ಮ ಪ್ರಧಾನಿ ಬಗ್ಗೆ ಹೆಮ್ಮೆಯಿದೆ. ಅಷ್ಟಕ್ಕೂ ಪ್ರಧಾನಿ ಫೋಟೋ ಬಗ್ಗೆ ನಿಮಗೆ ನಾಚಿಕೆ ಪಡುವಂತದ್ದೇನಿದೆ’ ಎಂದು ಕೇಳಿದೆ.

90 ನಿಮಿಷಗಳಲ್ಲಿ ಒಮಿಕ್ರಾನ್‌ ಪತ್ತೆ

Advertisement

ಒಮಿಕ್ರಾನ್‌ ರೂಪಾಂತರಿಯ ಪರೀಕ್ಷೆಗೆಂದು ದೆಹಲಿ ಐಐಟಿಯ ಸಂಶೋಧಕರು ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ಆ ಮಾರ್ಗದಲ್ಲಿ ಪರೀಕ್ಷೆ ನಡೆಸಿದರೆ ಕೇವಲ 90 ನಿಮಿಷಗಳಲ್ಲಿ ಫ‌ಲಿತಾಂಶ ಸಿಗುತ್ತದೆ ಎಂದು ತಿಳಿಸಲಾಗಿದೆ. ಒಮಿಕ್ರಾನ್‌ನಲ್ಲಿರುವ ಹಾಗೂ ಬೇರೆ ಯಾವುದೇ ರೂಪಾಂತರಿಯಲ್ಲಿರದ ವಿಶೇಷ ರೂಪಾಂತರಿ ಲಕ್ಷಣಕ್ಕಾಗಿ ಪರೀಕ್ಷೆ ಮಾಡಲಾಗುವುದು. ಈವರೆಗೆ ನಡೆಸಲಾಗುತ್ತಿದ್ದ ಪರೀಕ್ಷಾ ಮಾರ್ಗದಲ್ಲಿ ಫ‌ಲಿತಾಂಶಕ್ಕೆ 3 ದಿನಗಳ ಕಾಲ ಕಾಯಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next