Advertisement

Alert: ರೆಮಲ್‌ ಆರ್ಭಟ ಜೋರು: ಕೇರಳದಲ್ಲಿ ಭಾರೀ ಮಳೆ ಏಳು ಜಿಲ್ಲೆಗಳಿಗೆ ಅಲರ್ಟ್‌

09:42 AM May 30, 2024 | Team Udayavani |

ತಿರುವನಂತಪುರ: ಈಶಾನ್ಯ ಭಾರತದಲ್ಲಿ ರೆಮಲ್‌ ಚಂಡ ಮಾರು ತದ ಅವಾಂತರ ಮುಂದು ವರಿದಿದ್ದು, ಇತ್ತ ಕೇರಳದಲ್ಲೂ ವರುಣನ ಆರ್ಭಟ ಹೆಚ್ಚಾಗಿದೆ. ಸತತ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ತಿರುವನಂತಪುರ ತತ್ತರಿ ಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಕಟ್ಟಕ್ಕಾಡದಲ್ಲಿ ಕೋಳಿ ಫಾರ್ಮ್ಗೆ ನೀರು ನುಗ್ಗಿ 5,000 ಕೋಳಿಗಳು ಸಾವನ್ನಪ್ಪಿವೆ. ಕೊಲ್ಲಮ್‌, ಪತ್ತನಂತಿಟ್ಟ, ಆಳಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, 7 ಜಿಲ್ಲೆಗಳಿಗೂ ಐಎಂಡಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಮಣಿಪುರದಲ್ಲಿಯೂ ಮಳೆಯಿಂದ 4,000ಕ್ಕೂ ಅಧಿಕ ಮಂದಿಗೆ ತೊಂದರೆಯಾಗಿದೆ.

ಸಾವಿನ ಸಂಖ್ಯೆ 29ಕ್ಕೆ ಏರಿಕೆ: ಮಿಜೋರಾಂನಲ್ಲಿ ಭೂಕುಸಿತದಿಂದ ಮೃತರಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಕೇರಳಕ್ಕೆ ಇಂದೇ ಮುಂಗಾರು
ಕೇರಳಕ್ಕೆ ಇಂದೇ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆಯೇ ಮಾಹಿತಿ ನೀಡಿದೆ. ಮುಂದಿನ 24 ಗಂಟೆಗಳ ಒಳಗಾಗಿ ಮುಂಗಾರು ಪ್ರವೇಶವಾಗುವ ಬಗ್ಗೆ ಎಲ್ಲ ಅನುಕೂಲ ಪರಿಸ್ಥಿತಿಗಳು ಇವೆ ಎಂದಿದೆ.

ಇದನ್ನೂ ಓದಿ: Bidar: ಸಿಪಿಐ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದ ರೌಡಿಶಿಟರ್ ಕಾಲಿಗೆ ಗುಂಡೇಟು…

Advertisement
Advertisement

Udayavani is now on Telegram. Click here to join our channel and stay updated with the latest news.

Next