Advertisement

ಶತಮಾನದ ದುರಂತಕ್ಕೆ ನಲುಗಿದ ಕೇರಳದಲ್ಲಿ ಶಾಸಕರ ನಿವಾಸಕ್ಕೆ 80 ಕೋಟಿ !

05:54 PM Oct 24, 2018 | udayavani editorial |

ತಿರುವನಂತಪುರ : ಈಗಷ್ಟೇ ಮುಗಿದಿರುವ ಮಳೆಗಾಲದಲ್ಲಿ ಭೀಕರ ಪ್ರವಾಹ ಮತು ವ್ಯಾಪಕ ಗುಡ್ಡ ಕುಸಿತದ ಶತಮಾನದ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಅಪಾರ ಜೀವ ಹಾನಿ, ನಾಶ ನಷ್ಟಕ್ಕೆ ನಲುಗಿದ್ದ ಕೇರಳ ಸರಕಾರ ರಾಜ್ಯ ಪುನರ್‌ ನಿರ್ಮಾಣಕ್ಕೆ ಧನ ಸಹಾಯವನ್ನು ಕೋರುತ್ತಿರುವ ನಡುವೆಯೇ ಇದೀಗ ತನ್ನ ಶಾಸಕರಿಗಾಗಿ 80 ಕೋಟಿ ರೂ. ವೆಚ್ಚದ ಅಪಾರ್ಟ್‌ಮೆಂಟ್‌ ಸಂಕೀರ್ಣ ನಿರ್ಮಿಸಲು ಮುಂದಾಗಿರುವುದು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ.

Advertisement

ರಾಜ್ಯ ರಾಜಧಾನಿಯ ಹೃದಯ ಭಾಗದಲ್ಲಿರುವ ಶಾಸಕರ ನಿವಾಸದ ಹಳೇ ಕಟ್ಟಡ ಸಂಕೀರ್ಣವನ್ನು ಒಡೆದು ತೆಗೆದು ಅಲ್ಲಿ 80 ಕೋಟಿ ರೂ. ಹೊಸ ಅಪಾರ್ಟ್‌ಮೆಂಟ್‌ ಸಂಕೀರ್ಣ ನಿರ್ಮಿಸುವುದು ಕೇರಳ ಸರಕಾರದ ಮುಂದಿರುವ ಯೋಜನೆಯಾಗಿದೆ.

ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇರಳ ಸ್ಪೀಕರ್‌ ವಿ ಎಂ ಸುಧೀರನ್‌ ಮಾತನಾಡಿ, “ಶಾಸಕರಿಗೆ ಹೊಸ ವಸತಿ ಸೌಕರ್ಯ ಬೇಕು ಎನ್ನುವುದರಲ್ಲಿ ಸಂದೇಹವೇ ಇಲ್ಲ; ಆದರೆ ಶತಮಾನದ ನೈಸರ್ಗಿಕ ಪ್ರಕೋಪದಿಂದ ನಲುಗಿರುವ ಈ ವಿಷಮ ಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯನ್ನು ಅನುಷ್ಠಾನಿಸಲು ಸರಕಾರ ಮುಂದಾಗಿರುವುದು ಆಘಾತಕಾರಿಯಾಗಿದೆ’ ಎಂದು ಹೇಳಿದರು. 

ರಾಜ್ಯದಲ್ಲಿ ಶತಮಾನದ ನೈಸರ್ಗಿಕ ಪ್ರಕೋಪಕ್ಕೆ ತುತ್ತಾಗಿ ಮನೆ ಮಾರು ಕಳೆದುಕೊಂಡಿರುವ ಅಸಂಖ್ಯಾತ ಜನರಿಗೆ ಪುನರ್‌ ವಸತಿ ಕಲ್ಪಿಸಲು ಆಗಾಧ ಮೊತ್ತದ ಹಣ ಬೇಕಿರುವ ಈ ಸಂದರ್ಭದಲ್ಲಿ  ಶಾಸಕರ ಅಪಾರ್ಟ್‌ಮೆಂಟ್‌ನ ಒಂದೇ ಯೋಜನೆಗೆ 80 ಕೋಟಿ ರೂ. ವ್ಯಯಿಸುವುದು ನ್ಯಾಯೋಚಿತವಲ್ಲ ಎಂದು ಸುಧೀರನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next