Advertisement
ಇತರ ರಾಜ್ಯಗಳಿಂದ, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್ – 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಜಿಲ್ಲೆಗೆ ಆಗಮಿಸಬೇಕು. ಅವರು ಬಂದ ಬಳಿಕ ನಿಯಮದಂತೆ ಕ್ವಾರಂಟೈನ್‌ನಲ್ಲಿರಬೇಕು. ಉಲ್ಲಂಘಿಸಿ ಕಳ್ಳದಾರಿಗಳಲ್ಲಿ ಬರಲು ಯತ್ನಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.
ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗುತ್ತದೆ. ಅನಾವಶ್ಯಕ ಪ್ರಯಾಣವನ್ನು ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಗಳಲ್ಲಿ ಬ್ಯಾರಿಕೇಡ್‌ಇರಿಸಿ ನಿರ್ಬಂಧ ಹೇರಲಾಗುವುದು. ತಲಾ ಮೂವರು ಸಿಬಂದಿ ಅಲ್ಲಿ ಕರ್ತವ್ಯದಲ್ಲಿರುತ್ತಾರೆ. ಪಂಚಾಯತ್, ಜಿಲ್ಲಾಡಳಿತ, ಪೊಲೀಸರು ತೀರ್ಮಾನಿಸುವ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಇರುವುದು. ಗಡಿಗೆ ತಾಗಿರುವ ದ.ಕ. ಪ್ರದೇಶಗಳಿಗೆ ಅನಿವಾರ್ಯವಾಗಿ ತೆರಳಬೇಕಾಗಿರುವವರ ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.