Advertisement

ಕೇರಳ ಸರಕಾರ ಔಷಧಕ್ಕೆ ಬದಲಾಗಿ ಮದ್ಯ ವಿತರಿಸುತ್ತಿದೆ: ಶ್ರೀಕಾಂತ್‌

03:45 AM Jul 04, 2017 | |

ಕಾಸರಗೋಡು: ರಾಜ್ಯದಲ್ಲಿ ಜ್ವರ ಸಹಿತ ಮಾರಕ ರೋಗ ವ್ಯಾಪಕವಾಗಿ ಹರಡುತ್ತಿರುವಾಗ ಔಷಧಕ್ಕೆ ಬದಲಾಗಿ ಮದ್ಯವನ್ನು ಪಿಣರಾಯಿ ಸರಕಾರ ವಿತರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಹೇಳಿದರು.

Advertisement

ಜ್ವರದಿಂದ ರಾಜ್ಯದಲ್ಲಿ ದಿನಾ ಬಲಿಯಾಗುತ್ತಿದ್ದರೂ ಸರಕಾರ ತೋರುವ ಅನಾಸ್ಥೆಯನ್ನು ಪ್ರತಿಭಟಿಸಿ ಕಾಂಞಂಗಾಡ್‌ ಡಿ.ಎಂ.ಒ. ಕಚೇರಿಗೆ ಬಿಜೆಪಿ ಜಿಲ್ಲಾ ಸಮಿತಿ ನಡೆಸಿದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜ್ವರದಿಂದ ಯಾತನೆ ಅನುಭವಿಸು ತ್ತಿರುವಾಗ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯದ ಕ್ರಮ ತೆಗೆದುಕೊಳ್ಳದೆ ಮದ್ಯದ ಹಿಂದೆ ಸರಕಾರ ಸಾಗುತ್ತಿದೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ ಸಾಂಕ್ರಾಮಿಕ ರೋಗದಿಂದ ಹಲವಾರು ಮಂದಿಗೆ ಸಾವು ಸಂಭವಿಸುತ್ತಿರುವಾಗಲೂ ಅವಗಣನೆಯನ್ನು ಮುಖ್ಯಮಂತ್ರಿ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಜನರ ಜೀವದೊಂದಿಗೆ ಜೂಜು ನಡೆಸುತ್ತಿದೆ ಎಂದು ಆರೋಪಿಸಿದ ಅವರು ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರನ್ನು ನೇಮಿಸಿಲ್ಲ. ವೈದ್ಯರ ಮತ್ತು ಸಿಬಂದಿಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಕ್ರಮ ಜರಗಿಸದೆ ಅವಗಣನೆ
ಸರಕಾರಿ ಆಸ್ಪತ್ರೆಗಳಲ್ಲಿ ಔಷಧದ ಕೊರತೆಯಿದ್ದರೂ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ತೆಗೆದುಕೊ ಳ್ಳದೆ ಸಾಂಕ್ರಾಮಿಕ ರೋಗದ ಬಗ್ಗೆ ಅವಗಣಿಸಿದೆ ಎಂದರು. ಔಷಧ ನೀಡುವ ಬದಲಾಗಿ ರಾಜ್ಯದಲ್ಲಿ ಬಾರ್‌ ತೆರೆಯುವ ಕುರಿತಾಗಿ ಹೆಚ್ಚು ಆಸಕ್ತಿಯನ್ನು ವಹಿ ಸಿದ ಸರಕಾರ ಜನರನ್ನು ವಂಚಿಸುತ್ತಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ನಂಜಿಲ್‌ ಕುಂಞಿರಾಮನ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್‌, ಕಾಂಞಂಗಾಡ್‌ ಮಂಡಲ ಅಧ್ಯಕ್ಷ ಮಧು ಎನ್‌. ಮಾತನಾಡಿದರು. ಚಮ್ಮಟಂವ ಯಲಿನಿಂದ ಆರಂಭಿಸಿದ ಮೆರವಣಿಗೆಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಎಂ. ಬಾಲರಾಜ್‌, ಕುಂಞಿಕಣ್ಣನ್‌ ಬಳಾಲ್‌, ಅಲ್ಪಸಂಖ್ಯಾಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಮ್ಯಾಥ್ಯೂ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಪಿ. ಹರೀಶ್‌ ಮೊದಲಾದವರು ನೇತೃತ್ವ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next