Advertisement
ಬಂಧನದ ವೇಳೆ ಸಂದೀಪ್‌ನಿಂದ ವಶಪಡಿಸಿಕೊಂಡಿದ್ದ ಬ್ಯಾಗ್ ಮತ್ತು ಮೊಬೈಲ್ ಫೋನ್ ಅನ್ನು ಪರಿಶೀಲಿಸಿದರೆ, ಹ್ಯಾಂಡ್ಲರ್‌ಗಳ ಕುರಿತು ಮಾಹಿತಿ ಸಿಗಬಹುದು ಎನ್ನುವುದು ಎನ್‌ಐಎ ಅಭಿಪ್ರಾಯವಾಗಿದೆ. ಅವರ ಬ್ಯಾಗ್‌ನಲ್ಲಿನ ಸಾಕ್ಷ್ಯವೊಂದು ಈ ಪ್ರಕರಣಕ್ಕೂ ದೇಶವಿರೋಧಿ ಶಕ್ತಿಗಳಿಗೂ ನಂಟಿರುವ ಸುಳಿವು ನೀಡಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಆ ಬ್ಯಾಗ್‌ನಲ್ಲಿ ಮೊಹಸಿರ್ ಎಂದು ಬರೆದಿದ್ದು, ಅದರಲ್ಲಿ ಒಂದು ಸೀಲ್ ಕೂಡ ಇದೆ. ಈಗಾಗಲೇ ಅಧಿಕಾರಿಗಳು ಎನ್‌ಐಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಬ್ಯಾಗ್ ತೆರೆಯಲು ಅವಕಾಶ ನೀಡುವಂತೆ ಕೋರಿದ್ದಾರೆ.
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಮುಂಜಾನೆವರೆಗೂ ಅಂದರೆ ಸತತ 9 ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದ್ದಾರೆ. ಮಂಗಳವಾರ ಸಂಜೆ 5.15ಕ್ಕೆ ಶಿವಶಂಕರ್ ಅವರು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಚಿನ್ನ ಕಳ್ಳಸಾಗಣೆ ಆರೋಪಿಗಳಾದ ಸರಿತ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್‌ಗೆ ಸಹಾಯ ಮಾಡಲು ಶಿವಶಂಕರ್ ತಮ್ಮ ಕಚೇರಿಯನ್ನು ಬಳಸಿಕೊಂಡಿದ್ದರೇ ಎಂಬ ಕುರಿತು ವಿಚಾರಣೆ ನಡೆಸಲಾಗಿದೆ. ಈ ವೇಳೆ, ಅವರು ಆರೋಪಿಗಳೊಂದಿಗೆ ತಮಗಿದ್ದ ಸ್ನೇಹದ ಬಗ್ಗೆ ಬಾಯಿಬಿಟ್ಟಿದ್ದಾರೆ. ಶಿವಶಂಕರ್ ಅವರು ಆರೋಪಿಗಳಿಗೆ ಮಾಡಿದ್ದ ಹಲವು ಫೋನ್ ಕರೆಗಳ ಮಾಹಿತಿಯನ್ನೂ ತನಿಖಾಧಿಕಾರಿಗಳು ಪಡೆದಿದ್ದಾರೆ. ಇದೇ ವೇಳೆ, ಕಸ್ಟಮ್ಸ್ ಅಧಿಕಾರಿಗಳು ಶಿವಶಂಕರ್‌ರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.