Advertisement
ಆಗಸ್ಟ್ 8ರಿಂದ 15ರವರೆಗೆ ಕೇರಳ ರಾಜ್ಯ ಧಾರಾಕಾರ ಮಳೆಗೆ ತತ್ತರಿಸಿ ಹೋಗಿತ್ತು. ರಾಜ್ಯದ ಸುಮಾರು 37 ಡ್ಯಾಂಗಳ ಗೇಟ್ ಗಳನ್ನು ತೆರೆಯಲಾಗಿತ್ತು. ಮಳೆ, ಪ್ರವಾಹದಿಂದ ಕೇರಳದಲ್ಲಿ 361 ಮಂದಿ ಸಾವನ್ನಪ್ಪಿದ್ದರು. ಸುಮಾರು 10 ಲಕ್ಷ ಮಂದಿ ನಿರಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
Related Articles
Advertisement
ಮಳೆ ಮತ್ತು ಪ್ರವಾಹದಿಂದ ಕೇರಳದಲ್ಲಿ 27 ಸಾವಿರ ಮನೆಗಳು ನಾಶವಾಗಿದೆ. ಸುಮಾರು 45 ಸಾವಿರ ಎಕರೆಯಷ್ಟು ಕೃಷಿಭೂಮಿ ಜಲಾವೃತಗೊಂಡು ಹಾಳಾಗಿದೆ. 134 ಸೇತುವೆ ಹಾಗೂ ಪಿಡಬ್ಯುಡಿಯ 16 ಸಾವಿರ ಕಿಲೋ ಮೀಟರ್ ರಸ್ತೆ ಹಾಗೂ ಸ್ಥಳೀಯ 82 ಸಾವಿರ ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ ಎಂದು ವಿವರಿಸಿದೆ.
ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಕಂಬ, ಬ್ರಾಡ್ ಬ್ಯಾಂಡ್ ಕೇಬಲ್, ಸೇತುವೆಗಲ ಮರು ನಿರ್ಮಾಣಕ್ಕೆ ತುಂಬಾ ಸಮಯವೇ ತೆಗೆದುಕೊಳ್ಳಲಿದೆ. ಮನೆಗಳ ಪುನರ್ ನಿರ್ಮಾಣಕ್ಕೆ ತಿಂಗಳುಗಟ್ಟಲೇ ಬೇಕಾಗಲಿದೆ ಎಂದು ವರದಿ ತಿಳಿಸಿದೆ.
ಪ್ರವಾಸೋದ್ಯಮ ಮತ್ತು ಕ್ಯಾಶ್ ಕ್ರಾಪ್ ಕೇರಳಿಗರ ಜೀವನಾಡಿ. ಇವೆರಡೂ ಸಂಪೂರ್ಣವಾಗಿ ನಾಶವಾಗಿ ಬಿಟ್ಟಿದೆ. ಇದು ದೀರ್ಘಕಾಲದ ನಷ್ಟವಾಗಿದ್ದು, ಲಕ್ಷಾಂತರ ಜನರ ಬದುಕಿಗೆ ಹೊಡೆತ ನೀಡಿದೆ ಎಂದು ವಿವರಿಸಿದೆ.