Advertisement

Dowry: ಮದುವೆಗೂ ಮುನ್ನ ಚಿನ್ನ, ಜಾಗ, ಕಾರಿಗೆ ಬೇಡಿಕೆ… ಮನನೊಂದ ಯುವ ವೈದ್ಯೆ ಆತ್ಮಹತ್ಯೆ

10:45 AM Dec 07, 2023 | Team Udayavani |

ತಿರುವನಂತಪುರಂ: ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ ಮಂಗಳವಾರ ಬೆಳಗ್ಗೆ ಕಾಲೇಜು ಬಳಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಶಹಾನಾ ಪೋಷಕರು ದೂರು ನೀಡಿದ್ದು, ಘಟನೆ ಸಂಬಂಧ ಯುವ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಶಹಾನಾ ಗೆ ಮದುವೆ ನಿಗದಿಯಾಗಿದ್ದು ಅದರಂತೆ ಯುವ ವೈದ್ಯ ರುವೈಸ್ ಎಂಬುವವರ ಜೊತೆ ಮದುವೆ ಮಾತುಕತೆ ನಡೆದಿತ್ತು, ಈ ನಡುವೆ ಹುಡುಗನ ಕಡೆಯವರು ವರದಕ್ಷಿಣೆ ರೂಪದಲ್ಲಿ 150 ಪವನ್ ಚಿನ್ನ, 15 ಎಕರೆ ಜಾಗ ಜೊತೆಗೆ ಬಿಎಂಡಬ್ಲ್ಯೂ ಕಾರು ನೀಡುವಂತೆ ಕೇಳಿಕೊಂಡಿದ್ದಾರೆ ಆದರೆ ಶಹಾನಾ ಮನೆಯವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ, ಆದರೂ ಐದು ಎಕರೆ ಜಾಗ ಜೊತೆಗೆ ಕಾರು ನೀಡಲು ಶಹಾನಾ ಕುಟುಂಬ ಮುಂದಾಗಿತ್ತು ಆದರೆ ರುವೈಸ್ ಕುಟುಂಬದವರು ತಾವು ಹೇಳಿದ್ದಷ್ಟೇ ನೀಡಬೇಕೆಂದು ಹಠಹಿಡಿದಿದ್ದರು ಆದರೆ ಅಷ್ಟೊಂದು ವರದಕ್ಷಿಣೆ ನೀಡಲು ಆಗುವುದಿಲ್ಲ ಎಂದಾಗ ರುವೈಸ್ ಕುಟುಂಬ ಶಹಾನಾ ಮದುವೆ ವಿಚಾರದಿಂದ ದೂರ ಉಳಿಯಲು ಪ್ರಾರಂಭಿಸಿದ್ದಾರೆ ಇದರಿಂದ ಮನನೊಂದ ಶಹಾನಾ ತಾನು ಇದ್ದ ರೂಮಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇತ್ತ ಮಗಳು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ತಿಳಿಯುತ್ತಲೇ ಶಹಾನಾ ಪೋಷಕರು ಪೊಲೀಸ್ ಠಾಣೆಯಲ್ಲಿ ರುವೈಸ್ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸು ದಾಖಲಿಸಿದ್ದಾರೆ.

ಶಹಾನಾ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ರುವೈಸ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿದ ಪೊಲೀಸರು ಈ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ರುವೈಸ್ ಅವರನ್ನು ಪಿಜಿ ವೈದ್ಯರ ಸಂಘದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದ್ದು ತನಿಖೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ತನಿಖೆ ಮುಗಿಯುವವರೆಗೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗುವುದು ಎಂದು ಕೆಎಂಪಿಜಿಎ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Las Vegas: ನೆವಾಡಾ ವಿಶ್ವವಿದ್ಯಾನಿಲಯದಲ್ಲಿ ಗುಂಡಿನ ದಾಳಿ… ನಾಲ್ವರು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next