Advertisement
ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್ ಬೋರ್ಡ್ (ಕಿಫ್ ಬಿ) ನುಳ್ಳಿಪ್ಪಾಡಿಯ ಮೈದಾನದಲ್ಲಿ ಆಯೋಜಿಸಿದ ಮೂರು ದಿನಗಳ ಅಭಿವೃದ್ಧಿ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ “ಕೇರಳ ನಿರ್ಮಿತಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಭಿವೃದ್ಧಿಯ ಪ್ರಯೋಜನ ಮಲಬಾರು ಪ್ರದೇಶಕ್ಕೆ ಲಭಿಸುತ್ತಿಲ್ಲ ಎಂಬ ಬಗ್ಗೆ ಹಿಂದೆ ಆರೋಪಗಳಿತ್ತು. ಆದರೆ ಕಿಫ್ ಬಿ ಮೂಲಕ ಈ ಆರೋಪಗಳಿಂದ ಮುಕ್ತವಾಗಲು ಸಾಧ್ಯವಾಯಿತು. ಕೋಟ್ಯಂತರ ರೂ. ಯೋಜನೆಗಳನ್ನು ಮಲಬಾರು ಪ್ರದೇಶದಲ್ಲಿ ಜಾರಿಗೊಳಿಸಲಾಗಿದ್ದು, ಕೇರಳ ನಿರ್ಮಿತಿ ಎಂಬ ನಾಮಧೇಯದಲ್ಲಿ ಮೂಲಸೌಕರ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದರು.
ಈ ಹಿಂದೆ ಎಂದೂ ಕಾಣದ ಅಭಿವೃದ್ಧಿ ಕೇರಳದಲ್ಲಿ ಸಾಧ್ಯವಾಗಿದೆ. ಎಲ್ಲ ಕ್ಷೇತ್ರಗಳನ್ನು ಸೇರ್ಪಡೆಗೊಳಿಸಿ ಸಮಗ್ರ ಸಾಮೂಹಿಕ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಿದೆ. 10ರಿಂದ 15 ವರ್ಷಗಳ ದೀರ್ಘ ವರ್ಷಗಳಲ್ಲಿ ಸಾಧ್ಯವಾಗಲಿದ್ದ ಯೋಜನೆಗಳನ್ನು ಈ ಸರಕಾರ ಪೂರ್ತಿಗೊಳಿಸಿದೆ ಎಂದ ಅವರು ಅಭಿವೃದ್ಧಿ ಎಂದರೆ ಕೇವಲ ಯೋಜನೆಗಳು ಮಾತ್ರವಲ್ಲ, ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವ ಪ್ರಕ್ರಿಯೆಯಾಗಿದೆ ಎಂದರು. ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಕೆ. ಕುಂಞಿ ರಾಮನ್, ಎಂ. ರಾಜಗೋಪಾಲನ್, ಎಂ.ಸಿ. ಕಮರುದ್ದೀನ್, ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು, ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಪ್ರೊ| ಕೆ.ವಿ. ಜಯರಾಜನ್ ಉಪಸ್ಥಿತರಿದ್ದರು.