Advertisement
ರಾಜ್ಯಪಾಲರಾದ ಆರಿಫ್ ಎಂ. ಖಾನ್ ಅವರು ಕುಲಪತಿ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಅಧಿಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ವಿಸಿಗಳ ಅಧಿಕಾರದ ಮೇಲಿನ ಅತಿಕ್ರಮಣವಾಗಿದೆ. ರಾಜ್ಯಪಾಲರ ಹುದ್ದೆಯು ಸರಕಾರದ ವಿರುದ್ಧ ನಡೆಯುವುದಲ್ಲ, ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವುದು. ಅವರು ಆರ್‌ಎಸ್‌ಎಸ್‌ನ ಸಾಧನವಾಗಿ ವರ್ತಿಸುತ್ತಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.
Related Articles
Advertisement
ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಯಮದ ಪ್ರಕಾರ ಸರ್ಕಾರ ರಚಿಸುವ ಶೋಧ ಸಮಿತಿಯು ಇಂಜಿನಿಯರಿಂಗ್ ವಿಜ್ಞಾನ ವಿಷಯದಲ್ಲಿ ಪರಿಣಿತರಾಗಿರುವ ಕನಿಷ್ಠ ಮೂವರು ಹೆಸರನ್ನು ಸೂಚಿಸಬೇಕಿತ್ತು. ಆದರೆ ಅಬ್ದುಲ್ ಕಲಾಂ ವಿವಿ ವಿಚಾರದಲ್ಲಿ ಕೇವಲ ಒಬ್ಬರ ಹೆಸರನ್ನು ಮಾತ್ರ ಸೂಚಿಸಿ, ಅವರನ್ನೇ ಉಪ ಕುಲಪತಿಯನ್ನಾಗಿಸಲಾಗಿತ್ತು. ಇದರಿಂದಾಗಿ ನಿಯಮ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.