Advertisement

Actress: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಕೆ; ಖ್ಯಾತ ಕಿರುತೆರೆ ನಟಿ ಬಂಧನ

12:38 PM Oct 20, 2024 | Team Udayavani |

ತಿರುವನಂತಪುರಂ: ಮನೆಯಲ್ಲಿ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಖ್ಯಾತ ಕಿರುತೆರೆ ನಟಿಯೊಬ್ಬರನ್ನು ಬಂಧಿಸಲಾಗಿದೆ.

Advertisement

ಕೇರಳ ಕಿರುತೆರೆ‌ ನಟಿ ಶ್ಯಾಮನಾಥ್ (Actress Shamnath) ಅವರನ್ನು ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರು ವಶಕ್ಕೆ ತೆಗೆದುಕೊಂಡು ಆ ಬಳಿಕ ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ(ಅ.18ರಂದು) ಖಚಿತ ಮಾಹಿತಿಯ ಮೇರೆಗೆ ನಟಿಯ ನಿವಾಸದ ಮೇಲೆ ಪೊಲೀಸರು ರೇಡ್‌ ಮಾಡಿದ್ದು, ಈ ವೇಳೆ ಅವರ ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ (MDMA) ಪತ್ತೆಯಾಗಿದೆ.

ಎರಡು ಮಿಲಿ ಗ್ರಾಂ ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ ನಟಿಯ ಮನೆಯಲ್ಲಿ ಪತ್ತೆಯಾಗಿದ್ದು, ಆಕೆ ಕೆಲ ಸಮಯದಿಂದ ಡ್ರಗ್ಸ್ ಬಳಸುತ್ತಿದ್ದಳು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಎಎನ್‌ಐಗೆ ತಿಳಿಸಿದ್ದಾರೆ.

Advertisement

ವಿತರಕನಿಂದ ಡ್ರಗ್ಸ್‌ ಪಡೆದುಕೊಂಡು ವಾಪಸ್‌ ಆಗುತ್ತಿದ್ದಾಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಡಕ್ಕಲ್ ಮೂಲದ ನವಾಜ್ ಎಂಬಾತನಿಂದ ಶ್ಯಾಮನಾಥ್ ಡ್ರಗ್ಸ್ ತೆಗೆದುಕೊಂಡಿದ್ದರು. ನಟಿಯ ಹೇಳಿಕೆ ಆಧರಿಸಿ ಪೊಲೀಸರು ನವಾಜ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.

ನಟಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next