Advertisement

Keradi Government School: ಸರಕಾರಿ ಶಾಲೆಗೆ ದಾಖಲಾಗಿ: ರಿಷಬ್‌ ಶೆಟ್ಟಿ

01:22 AM Feb 25, 2024 | Team Udayavani |

ಕುಂದಾಪುರ: ನಾನು ಕೂಡ ಸರಕಾರಿ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಅನೇಕ ಸಾಧಕರು ಸರಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿ ದೊಡ್ಡ ಮಟ್ಟ ತಲುಪಿದ್ದಾರೆ. ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದರ ಬಗ್ಗೆ ಕೀಳಂದಾಜು ಸಲ್ಲದು ಎಂದು ಚಿತ್ರನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದರು.

Advertisement

ಕುಂದಾಪುರದ ಕೆರಾಡಿ ಶಾಲೆಯನ್ನು ರಿಷಬ್‌ ಶೆಟ್ಟಿ ಫೌಂಡೇಶನ್‌ ನೇತೃತ್ವದಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಶನಿವಾರ ನಡೆದ ಸಮಾಲೋಚನೆ, ಅಭಿವೃದ್ಧಿ ಯೋಜನೆ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆರಾಡಿ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌, ನ್ಪೋಕನ್‌ ಇಂಗ್ಲಿಷ್‌, ಕಂಪ್ಯೂಟರ್‌ ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಯೋಗದ ಸ್ಮರ್ಧಾತ್ಮಕ ಪರೀಕ್ಷಾ ತಯಾರಿ, ವ್ಯಕ್ತಿತ್ವ ವಿಕಸನ ತರಗತಿ, ವಾಹನ ವ್ಯವಸ್ಥೆ ಮಾಡಲಾಗುವುದು. ನಮ್ಮದು ಖಾಸಗಿ ಶಾಲೆಯ ಜತೆ ಸ್ಪರ್ಧೆಯಲ್ಲ. ಆದರೆ ಕನ್ನಡ ಶಾಲೆಯನ್ನು ಮಾದರಿಯಾಗಿಸುವುದು ನಮ್ಮ ಗುರಿ. ರಿಷಬ್‌ ಶೆಟ್ಟಿ ಫೌಂಡೇಶನ್‌ ಮುಂದಿನ 5 ವರ್ಷಗಳ ಅವಧಿಗೆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಿದೆ ಎಂದರು.

ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ ಶೆಟ್ಟಿ, ಊರ ಪ್ರಮುಖರಾದ ನಾಗಪ್ಪ ಕೊಠಾರಿ, ವರಸಿದ್ಧಿ ವಿನಾಯಕ ಪ.ಪೂ. ಕಾಲೇಜಿನ ನಿರ್ದೇಶಕ ಪ್ರದೀಪ್‌ ಶೆಟ್ಟಿ, ಶಾಲಾ ಶಿಕ್ಷಕರು, ಪೋಷಕರು, ಮುಖಂಡರು, ಹಳೆ ವಿದ್ಯಾರ್ಥಿಗಳು, ಊರವರು, ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಸತೀಶ್‌ ಕೊಠಾರಿ ಸ್ವಾಗತಿಸಿ, ಮುಖ್ಯ ಶಿಕ್ಷಕ ವಿಜಯ ಕುಮಾರ್‌ ಶೆಟ್ಟಿ ವಂದಿಸಿದರು. ದಿವ್ಯಾಧರ ಶೆಟ್ಟಿ ಮೂಡುಗಲ್ಲು ಕಾರ್ಯಕ್ರಮ ನಿರೂಪಿಸಿದರು.

Advertisement

ಏನೆಲ್ಲ ಸೌಲಭ್ಯ?
-ಸರಕಾರಿ ಶಾಲೆಗೆ ಖಾಸಗಿ ಶಾಲೆಯ ಸ್ಪರ್ಶ. ಅನುಭವಿ ಅಧ್ಯಾಪಕ ವೃಂದ.

-ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನ್ಪೋಕನ್‌ ಇಂಗ್ಲಿಷ್‌ ತರಬೇತಿ.

-ಉತ್ತಮ ಗುಣಮಟ್ಟದ ಆಟದ ಮೈದಾನ, ಕ್ರೀಡಾ ಭವಿಷ್ಯಕ್ಕಾಗಿ ನುರಿತ ದೈಹಿಕ ಶಿಕ್ಷಣ ಶಿಕ್ಷಕರು.

-ಸ್ಮರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ, ನುರಿತ ಶಿಕ್ಷಕರಿಂದ ಕಲೆ, ಸಾಂಸ್ಕೃತಿಕ ಚಟುವಟಿಕೆ ತರಬೇತಿ.

-ಸ್ಮಾರ್ಟ್‌ ಕ್ಲಾಸ್‌, ಗುಣಮಟ್ಟದ ಕಂಪ್ಯೂಟರ್‌ ಶಿಕ್ಷಣ.

-ಶಾಲಾ ವಾಹನದ ವ್ಯವಸ್ಥೆ.

ಬಡಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂದು ಮೊದಲ ಹೆಜ್ಜೆ ಇಟ್ಟಿದ್ದೇವೆ. ಊರಿನ ಎಲ್ಲರ ಸಹಕಾರ ಅಗತ್ಯ. ನಿಮ್ಮ ಮಕ್ಕಳಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರಿ ಶಾಲೆಯಲ್ಲಿಯೇ ಉಚಿತ ವಾಗಿ ನೀಡಲಿದ್ದೇವೆ. ಶಾಲೆಗೆ ಕಳುಹಿಸಿ, ನಮ್ಮೂರಿನ ಹೆಮ್ಮೆಯ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕೈಜೋಡಿಸೋಣ.
– ರಿಷಬ್‌ ಶೆಟ್ಟಿ, ನಟ, ನಿರ್ದೇಶಕ

 

Advertisement

Udayavani is now on Telegram. Click here to join our channel and stay updated with the latest news.

Next