ಪ್ಯುಜು: ವಿಶ್ವ ಚಾಂಪಿಯನ್ ಕೆಂಟೊ ಮೊಮೊಟ “ಚೀನ ಓಪನ್ ಬ್ಯಾಡ್ಮಿಂಟನ್’ ಟೂರ್ನಿಯ ಫೈನಲ್‌ಲ್ಲಿ ಥಾಯ್ಲೆಂಡ್‌ನ ಚುಹುಟಿನ್ ಚೆನ್ ವಿರುದ್ಧ ಗೆದ್ದು ಕಿರೀಟ ಏರಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್‌ನಲ್ಲಿ ಕೆಂಟೊ ಮೊಮೊಟ 21-13, 11-21, 21-16 ಗೇಮ್ ಗ ಳಿಂದ ಟಿನ್ ಟೆನ್ ಅವರನ್ನು ಸೋಲಿಸಿದರು. ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ 5ನೇ ಬಾರಿ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ’ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಮೊಮೊಟ ಅವರದಾಯಿತು. ಇದರ ಜತೆಗೆ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕಗಳೂ ಈ ಜಪಾನಿ ಷಟ್ಲರ್ ಪಾಲಾಗಿವೆ.
ಆರಂಭಿಕ ಗೇಮ್ ಅನ್ನು ಮೊಮೊಟ ಸುಲಭದಲ್ಲಿ ಗೆದ್ದರು. ಆದರೆ 2ನೇ ಗೇಮ್‌ನಲ್ಲಿ ಟಿನ್ ಚೆನ್ ತಿರುಗಿ ಬಿದ್ದರು. ನಿರ್ಣಾ ಯಕ ಗೇಮ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆ ಯಿತಾದರೂ ಅಂತಿಮವಾಗಿ ಮೊಮೊಟ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಮೊಮೊಟ “ಡೆನ್ಮಾರ್ಕ್ ಓಪನ್’ ಫೈನಲ್‌ನಲ್ಲೂ ಟಿನ್ ಚೆನ್ ಅವರನ್ನು ಸೋಲಿಸಿದ್ದರು. ಮುಂಬರುವ ಹಾಂಕಾಂಗ್ ಓಪನ್‌ನಲ್ಲಿ ಮೊಮೊಟ ಪಾಲ್ಗೊಳ್ಳಲಿದ್ದು,ಮೊದಲ ಪಂದ್ಯದಲ್ಲಿ ಚೀನದ ಲಿನ್ ಡಾನ್ ಅವರನ್ನು ಎದುರಿಸಲಿದ್ದಾರೆ.
ಚೆನ್ ಯುಫಿ ವನಿತಾ ಚಾಂಪಿಯನ್
ವನಿತೆಯರ ಸಿಂಗಲ್ಸ್ ಪ್ರಶಸ್ತಿ ಚೀನದ ಚೆನ್ ಯುಫಿ ಪಾಲಾಗಿದೆ.ಅವರು ಜಪಾನಿನ ನೊಜೊಮಿ ಒಕುಹಾರ ಅವರನ್ನು 21-10, 21-16 ಗೇಮ್‌ಗಳಿಂದ ಪರಾಭವಗೊಳಿಸಿದರು.