ಬಂಗಾರಪೇಟೆ: ಬೆಂಗಳೂರು ನಗರ ಸ್ಥಾಪನೆಮಾಡಿರುವ ನಾಡಪ್ರಭು ಕೆಂಪೇಗೌಡ ಯಾವುದೇ ಒಂದು ಸಮುದಾಯಕ್ಕೆ ಸೀಮಿತ ಅಲ್ಲ, ಹಿಂದುಳಿದವರ್ಗಗಳ, ಶೋಷಿತರ ಬೆಂಬಲವಾಗಿ ನಿಂತಿದ್ದ ಅವರು, ಸಮಸ್ತ ನಾಡಿನ ಆಸ್ತಿ ಆಗಿದ್ದಾರೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವನಾಡಪ್ರಭು ಕೆಂಪೇಗೌಡರ ಪುತ್ಥಳಿಗೆ ಹೂಮಾಲೆಹಾಕಿ ಮಾತನಾಡಿ, ಕೆಂಪೇಗೌಡರು ನಿರ್ಮಾಣಮಾಡಿದ ಬೆಂಗಳೂರು ನಗರವು ಅಂತಾರಾಷ್ಟ್ರೀಯಮಟ್ಟದಲ್ಲಿ ಐತಿಹಾಸಿಕ ಮನ್ನಣೆ ಪಡೆದಿದೆ.ಕೆಂಪೇಗೌಡರ ಆಡಳಿತ ವೈಖರಿ, ರಾಜಕೀಯ,ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದು ವಿವರಿಸಿದರು.
ವಿಜಯನಗರದ ಅರಸರ ಸಾಮಂತರಾಗಿದ್ದ ಕೆಂಪೇಗೌಡ 38 ವರ್ಷಗಳ ಕಾಲ ಆಳ್ವಿಕೆ ನಡೆಸಿ,ಬೆಂಗಳೂರೆಂಬ ನಗರವನ್ನು ನಿರ್ಮಿಸಿದರು.ರಾಜಕೀಯನೈಪುಣ್ಯತೆ, ಅಭಿವೃದ್ಧಿಯಮುನ್ನೋಟ,ವ್ಯವಹಾರಿಕ ಮನೋಭಾವ, ಕಲೆಗೆ ನೀಡಿದಪ್ರೋತ್ಸಾಹದಿಂದಾಗಿ ಇತಿಹಾಸ ಪುಟದಲ್ಲಿಅಮರರಾದರು ಎಂದು ಹೇಳಿದರು.
ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನುಅದ್ಧೂರಿಯಾಗಿ ಮಾಡುವ ಆಸೆಯಿತ್ತು. ಆದರೆ,ಮಹಾಮಾರಿ ಕೊರೊನಾದಿಂದ ಸರಳವಾಗಿಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿಯೂರಸ್ತೆ ಮಧ್ಯೆಕೆಂಪೇಗೌಡರ ಪುತ್ಥಳಿ ಸ್ಥಾಪನೆ ಮಾಡಿಲ್ಲ.ಆದರೆ, ಪಟ್ಟಣದಲ್ಲಿ ಮಾಡುವ ಮೂಲಕಕೆಂಪೇಗೌಡರ ಸ್ಮರಣೆ ಮಾಡಲಾಗಿದೆ ಎಂದು ವಿವರಿಸಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಮಾಡುವ ವೇಳೆ ಈ ಭಾಗದ ಕೆಲವು ಮುಖಂಡರುವಿರೋಧ ವ್ಯಕ್ತಪಡಿಸಿ ನಾನಾ ತೊಂದರೆ ನೀಡಿದರು.ಇನ್ನು ಕೆಲವು ಮುಖಂಡರು ಕಾಂಗ್ರೆಸ್ ಶಾಸಕರಿಂದಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಿಸಬಾರದೆಂಬರಾಜಕೀಯ ದುರುದ್ದೇಶದಿಂದ ವಿನಾಕಾರಣಸಂಕಷ್ಟಗಳನ್ನು ನೀಡಿದರೂ ಎದೆಗುಂದದೇ ಆಲೂಗಡ್ಡೆ ವ್ಯಾಪಾರಿ ವೈ.ಇ.ಶ್ರೀನಿವಾಸ್ ಅವರ ಕೊಡುಗೆಯಾಗಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪಿಕಾಡ್‌ಬ್ಯಾಂಕ್ ಅಧ್ಯಕ್ಷ ಹೆಚ್.ಕೆ.ನಾರಾಯಣಸ್ವಾಮಿ, ಹುಲಿಬೆಲೆ ಗ್ರಾಪಂ ಅಧ್ಯಕ್ಷ ಹೆಚ್.ವಿ.ಸುರೇಶ್,ಐನೋರಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಿತ್ರ ಶ್ರೀನಿವಾಸ್, ಹುಲಿ ಬೆಲೆ ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟೇಶ್, ಪುರಸಭೆ ಸದಸ್ಯ ರಾಕೇಶಗೌಡ,ಮುಖಂಡರಾದ ವೈ.ಇ.ಶ್ರೀನಿವಾಸ್, ರಘುನಾಥ್,ಜಗದೀಶ್, ಕುಪ್ಪನಹಳ್ಳಿ ಆನಂದ್ ಮುಂತಾದವರುಹಾಜರಿದ್ದರು.