Advertisement

ಕೆಂಪೇಗೌಡರು ಆದರ್ಶ, ಟಿಪ್ಪು ದೇಶದ್ರೋಹಿ: ಈಶ್ವರಪ್ಪ

10:01 PM Nov 11, 2022 | Team Udayavani |

ಶಿವಮೊಗ್ಗ: ಕೆಂಪೇಗೌಡರ ಆದರ್ಶ ಜನ ಪರಿಪಾಲನೆ ಮಾಡಬಾರದು ಎಂಬ ಉದ್ದೇಶದಿಂದ ಕೆಲವು ದೇಶದ್ರೋಹಿಗಳು ಟಿಪ್ಪು ಸುಲ್ತಾನ್‌ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಭಕ್ತರ ವಿಚಾರ ಬಹಳ ಬೇಗ ಜನರಿಗೆ ತಲುಪಬಾರದು ಎಂಬ ಉದ್ದೇಶದಿಂದ ತನ್ವೀರ್‌ ಸೇಠ್ ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಹೊರಟಿದ್ದಾರೆ.

ಕೆಂಪೇಗೌಡರು ಇಡೀ ದೇಶಕ್ಕೆ ಆದರ್ಶ, ಟಿಪ್ಪು ಸುಲ್ತಾನ್‌ ದೇಶದ್ರೋಹಿ ಅಂತಾ ಹೆಸರು ಪಡೆದಿರೋನು. ಕೆಂಪೇಗೌಡರು ಅತ್ಯಂತ ಒಳ್ಳೆಯ ಆಡಳಿತಗಾರ. ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಕೆರೆ ಕಟ್ಟೆ, ಪಾರ್ಕ್‌, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರಿಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ದರು. ಪರಿಸರವನ್ನು ಕಾಪಾಡಿದ ಆಡಳಿತದ ದಿಗ್ಗಜ ಕೆಂಪೇಗೌಡ. ಅಂತಹ ಆಡಳಿತಗಾರನ ಪ್ರತಿಮೆಯನ್ನು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವುದು ಬಹಳ ಗೌರವ ಎಂದರು.

ಕೆಲವರು ಧರ್ಮವನ್ನು ಉಳಿಸುತ್ತಾರೆ. ಧರ್ಮದ ಸಿದ್ಧಾಂತ ಸಾಮಾನ್ಯ ಜನರಿಗೆ ತಿಳಿಸುವ ಮೂಲಕ ಪ್ರಖ್ಯಾತರಾಗಿದ್ದಾರೆ. ಮೊದಲ ಹಿಂದುತ್ವದ ಪ್ರತಿಪಾದಕ ಕನಕದಾಸರು. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಇಡೀ ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ.

ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ರಾಮಾಯಣಕ್ಕೆ, ಮಹಾಭಾರತಕ್ಕೆ, ಈ ದೇಶದ ಸಿದ್ಧಾಂತಕ್ಕೆ ಅಪಮಾನ ಮಾಡಿದ್ದಾರೆ. ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಖಂಡಿಸಿದ್ದಾರೆ. ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತಾ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ಪಕ್ಷದ ರಾಷ್ಟಿÅàಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ? ಹಿಂದು, ಹಿಂದುತ್ವದ ಬಗ್ಗೆ ಈ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಹಿಂದು, ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡ್ತಾರೋ ಅಂತಹವರಿಗೆ ಈ ದೇಶದಲ್ಲಿ ಸ್ಥಾನಮಾನ ಇರಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next