Advertisement

ತೀರ್ಪುಗಾರರ ನಿರ್ಧಾರಕ್ಕೆ ತಲೆ ಬಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ

03:41 PM Aug 28, 2019 | Naveen |

ಕೆಂಭಾವಿ: ಪ್ರತಿಯೊಂದು ಹೊರಾಂಗಣ ಆಟಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಆಟಗಳನ್ನು ಕ್ರೀಡಾಕೂಟದಲ್ಲಿ ಆಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸ್ಥಿತಿ ಉತ್ತಮಪಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ ಹೇಳಿದರು.

Advertisement

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಆಟಗಳಲ್ಲಿ ಸೋಲು ಗೆಲುವಿನ ಪರಾಮರ್ಶೆ ಮಾಡದೆ ವಿದ್ಯಾರ್ಥಿಗಳು ಆಟದ ಕಡೆ ಹೆಚ್ಚು ಗಮನ ನೀಡಬೇಕು, ತೀರ್ಪುಗಾರರ ತೀರ್ಪಿಗೆ ತಲೆಬಾಗಿ ಆಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದ ಅವರು, ಈ ಶಾಲೆ ಸತತ 14 ವರ್ಷಗಳಿಂದ ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್‌. ಪೊಲೀಸ್‌ ಪಾಟೀಲ, ಕ್ರೀಡಾಕೂಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದು, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಮೈದಾನ ವ್ಯವಸ್ಥೆ ಕಲ್ಪಿಸಿದೆ. ಖೋ ಖೋ, ಕಬಡ್ಡಿ, ಥ್ರೋಬಾಲ್, ವಾಲಿಬಾಲ್ ಸೇರಿದಂತೆ ಇನ್ನತರೆ ಕ್ರೀಡೆಗಳಿದ್ದು, ಎಲ್ಲ ಕ್ರೀಡಾಪಟುಗಳು ನಿಯಮ ಬದ್ಧವಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಲೆ ಕ್ರೀಡಾಕೂಟಕ್ಕೆ ಸಹಕಾರಿಯಾಗಲು ಉಚಿತ ಪಾರಿತೋಷಕ ಹಾಗೂ ಸಲಕರಣೆಗಳನ್ನು ನೀಡಿದ ಜಿ. ರಾಜು, ನ್ಯಾಷನಲ್ ಡೆವಲಪರ್ಸ್‌ನ ಶ್ರೀಕಾಂತ ಗುತ್ತೇದಾರ ಹಾಗೂ ನಾಸೀರ ಅಹ್ಮದ ಗೋಗಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಗುರು ಅನಿಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಭಂಗ್‌ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ಸಂಜೀವರಾವ್‌ ಕುಲಕರ್ಣಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂಜೀವ ದರ್ಬಾರಿ, ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ. ಪಾಟೀಲ, ಮಲ್ಲಪ್ಪ ತಳವಾರ, ಹಣಮಂತ್ರಾಯ ಯಲಗೋಡ, ರಹೆಮಾನ ಪಟೇಲ್, ಸಿಆರ್‌ಸಿ ಶ್ರೀಶೈಲ ಪಾಸೋಡಿ ಇದ್ದರು. ನಿಂಗನಗೌಡ ದೇಸಾಯಿ ನಿರೂಪಿಸಿದರು. ನಿಜಾಮುದ್ದಿನ ಅವರಾದಿ ಸ್ವಾಗತಿಸಿದರು.ದೈಹಿಕ ಶಿಕ್ಷಕ ಪ್ರಭಾಕರ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next