Advertisement

ಕೆಂಭಾವಿಯಲ್ಲಿ ಸ್ವಚ್ಛತೆಗೆ ಮುಂದಾದ ಪುರಸಭೆ

04:33 PM Mar 18, 2020 | Naveen |

ಕೆಂಭಾವಿ: ಮಾರಕ ಕೊರೊನಾ ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದಲ್ಲಿ ದಿನಿನಿತ್ಯ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

Advertisement

ವಿವಿಧ ಬಡಾವಣೆಗಳಲ್ಲಿ ಪುರಸಭೆ ವಾಹನ ಸಂಚರಿಸಿ ರಸ್ತೆ ಬದಿ ಕಸ ಮತ್ತು ಮನೆಗಳಲ್ಲಿನ ಕಸ ಸಂಗ್ರಹಿಸುತ್ತಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಪ್ರತಿಯೊಂದು ಬಡಾವಣೆಗಳಲ್ಲಿ ಸ್ವಚ್ಛತೆ ಮಾಡಲಾಗುತ್ತಿದೆ. ಇದಕ್ಕೆ ಸಹಕಾರ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ದೇವೇಂದ್ರ ಹೆಗ್ಗಡೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ರಾತ್ರಿ ವಿವಿಧ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿದ್ದಾರೆ. ಇನ್ನು ಕೆಲವು ಬಡಾವಣೆಗಳಲ್ಲಿ ಕಸದ ವಾಹನ ಬಾರದೆ ಇರುವುರಿಂದ ಮಂಗಳವಾರ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಸ್ವಚ್ಛತಾ ಮೇಲುಸ್ತುವಾರಿ ಅಧಿಕಾರಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಪಟ್ಟಣದ ಹಳೆ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ 10 ರೂ. ದರದ ಮಾಸ್ಕ್ ಗಳನ್ನು 40ರಿಂದ 50 ರೂ. ಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಜನರು ಮಾಸ್ಕ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟಕ್ಕೂ ಮಾರಾಟಗಾರರಿಗೆ ಇಷ್ಟೊಂದು ಮಾಸ್ಕ್ ಗಳು ದೊರೆತಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next