Advertisement
ಕೇಜ್ರಿವಾಲ್ ಮಧ್ಯಾಂತರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಇ.ಡಿ., ಈವರೆಗೆ ಯಾವುದೇ ರಾಜಕೀಯ ನಾಯಕನಿಗೆ ಚುನಾವಣೆ ಪ್ರಚಾರ ನಿಮಿತ್ತ ಜಾಮೀನು ನೀಡಿದ್ದಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ವಿಚಾರಣೆ ನಡೆಯುತ್ತಿದ್ದರೆ ಅಂಥವರಿಗೂ ಜಾಮೀನು ನೀಡಲಾಗುವುದಿಲ್ಲ ಎಂದು ಹೇಳಿತು. ಜತೆಗೆ ಆಪ್ ಪ್ರಚಾರಕ್ಕೆಂದು ದೇಣಿಗೆ ಸಂಗ್ರಹಿಸುತ್ತಿದ್ದ ಚನ್‌ಪ್ರೀತ್ ಸಿಂಗ್‌ನ ಖರ್ಚಲ್ಲೇ ಕೇಜ್ರಿ 7 ದಿನ ಗೋವಾದ 7ಸ್ಟಾರ್ ಹೊಟೇಲ್‌ನಲ್ಲಿ ತಂಗಿದ್ದರು ಎಂದೂ ಆರೋಪಿಸಿತು.
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧ ಇ.ಡಿ. ಶುಕ್ರವಾರ ಮೊದಲ ಆರೋಪಪಟ್ಟಿ ಸಲ್ಲಿಸಲಿದೆ. ಇದೇ ಮೊದಲ ಬಾರಿಗೆ ಕೇಜ್ರಿ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿ, ಹಗರಣದ “ಕಿಂಗ್ ಪಿನ್’ ಎಂದು ಉಲ್ಲೇಖಿಸುವ ಸಾಧ್ಯತೆಯಿದೆ. ಇದೇ ವೇಳೆ, ಕೇಜ್ರಿ ಮಧ್ಯಾಂತರ ಜಾಮೀನು ಅರ್ಜಿಯ ತೀರ್ಪು ಕೂಡ ಶುಕ್ರವಾರ ಹೊರಬೀಳಲಿದೆ.