ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು (ದಿಲ್ಲಿ- ಹರ್ಯಾಣ) ಗಡಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಭೇಟಿ ನೀಡಿದ್ದಾರೆ.
ಡಿ.7ರಂದು ಕೇಜ್ರಿವಾಲ್ ಸಿಂಘು ಗಡಿಗೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಇದೀಗ ರವಿವಾರ ಮತ್ತೊಮ್ಮೆ ಭೇಟಿಯಾಗಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ರದ್ದುಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಅವರು, ರೈತರು ತಮ್ಮ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಕೃಷಿ ಕಾಯ್ದೆಯ ಬಗ್ಗೆ ರೈತರೊಂದಿಗೆ ಮುಕ್ತ ಚರ್ಚೆಯಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವರುಗಳಿಗೆ ಸವಾಲು ಹಾಕುತ್ತೇನೆ. ಆಗಲಾದರೂ ಈ ಕಾಯ್ದೆಗಳಿಂದ ಎಷ್ಟು ನಷ್ಟವಾಗಲಿದೆ ಎಂದು ಸರ್ಕಾರಕ್ಕೆ ತಿಳಿಯಲಿದೆ ಎಂದು ಕೇಜ್ರಿವಾಲ್ ಹೇಳಿದರು.
ಇದನ್ನೂ ಓದಿ:ಜೆಡಿಯು ಅಧ್ಯಕ್ಷ ಸ್ಥಾನ ತ್ಯಜಿಸಿದ ನಿತೀಶ್ ಕುಮಾರ್; ಆರ್.ಸಿ.ಪಿ ಸಿಂಗ್ ಹೊಸ ಅಧ್ಯಕ್ಷ
ಕೆಲವು ಪ್ರಮುಖ ನಾಯಕರು, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ಸಮರ್ಥಿಸುತ್ತಾರೆ. ಆದರೆ ಈ ಕಾಯ್ದೆಯಿಂದ ರೈತರಿಗೆ ಹೇಗೆ ಅನುಕೂಲವಾಗಲಿದೆ ಎಂದು ಒಬ್ಬನೇ ಒಬ್ಬ ನಾಯಕ ಹೇಳಿರುವುದು ನಾನು ಕೇಳಿಲ್ಲ ಎಂದು ಕೇಜ್ರಿವಾಲ್ ಹೇಳಿದರು.