Advertisement
ಬುಧವಾರ ರಾತ್ರಿ ದೂರವಾಣಿ ಮೂಲಕ ಕೆಲವು ನಾಯಕರ ಜತೆ ಸಮಾಲೋಚನೆ ಸಹ ನಡೆಸಿದ್ದು, ದೆಹಲಿ, ಪಂಜಾಬ್ ನಂತರ ಹರಿಯಾಣ ಮತ್ತು ಗುಜರಾತ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕರ್ನಾಟಕದಲ್ಲಿಯೂ ಪಕ್ಷ ಸಂಘ ಟಿಸಲು ನಿರ್ಧರಿಸಲಾಗಿದೆ. ಹೀಗಾಗಿ, ನಮ್ಮ ಜತೆ ಕೈಜೋಡಿಸಿ ಎಂದು ಆಹ್ವಾನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
Related Articles
Advertisement
ಮೂರೂ ಪಕ್ಷಗಳಲ್ಲಿ ಆತಂಕಆಮ್ ಆದ್ಮಿ ಪಕ್ಷದ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲೂ ಕುತೂಹಲವಿದ್ದು ರಾಜ್ಯದಲ್ಲಿ ಆ ಪಕ್ಷಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ದೊರೆಯಬಹುದು, ಅದರಿಂದ ನಮಗಾಗಬಹುದಾದ ಲಾಭ-ನಷ್ಟ ಏನು ಎಂಬ ಬಗ್ಗೆಯೂ ಮೂರೂ ಪಕ್ಷಗಳು ತಲೆಕೆಡಿಸಿಕೊಂಡಿವೆ. ರೈತ ಸಂಘಟನೆಗಳ ಜತೆಗೂಡಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುವುದಾಗಿ ಘೊಷಣೆ ಮಾಡಿರುವುದರಿಂದ ಸಹಜವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಆತಂಕ ಶುರುವಾಗಿದೆ. ಆಪ್ ಸೇರಿದ ರೈತ ಮುಖಂಡರು
ಬೆಂಗಳೂರು: ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ನೂರಾರು ರೈತ ಮುಖಂಡರು ಗುರುವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, 1983ರಲ್ಲಿ ರೈತರನ್ನು ಗುಂಡುಹಾಕಿ ಕೊಂದರೆ, ಇಂದು ಆಳುತ್ತಿರುವ ಪಕ್ಷಗಳು ಗುಂಡುಹಾಕದೆ ರೈತರನ್ನು ಕೊಲ್ಲುತ್ತಿವೆ. ಇತಿಹಾಸ ಮರುಕಳಿಸುವ ಕಾಲ ಸನ್ನಿಹಿತವಾಗಿದ್ದು, 2023ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ರೈತರು ಕರ್ನಾಟಕ ವಿಧಾನಸಭೆ ಪ್ರವೇಶಿಸಲಿದ್ದಾರೆ’ ಎಂದು ತಿಳಿಸಿದರು. ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ಅಧಿಕಾರಿಗಳನ್ನು ಭ್ರಷ್ಟಾಚಾರ ಮತ್ತು ದುಷ್ಟರನ್ನು ಮಾಡಿದ್ದೇ ರಾಜಕೀಯ ಪಕ್ಷಗಳು. ನಾಯಕರ
ಶಿಷ್ಯರನ್ನೂ ಡಕಾಯಿತರನ್ನಾಗಿ ಮಾಡಿವೆ. ಸರ್ಕಾರದಲ್ಲಿ ಹಣ ತುಂಬಿ ತುಳುಕುತ್ತಿದೆ. ಆದರೆ, ಭ್ರಷ್ಟಾಚಾರದಿಂದ ಅದು ಕೆಲವರಿಗಷ್ಟೇ ಸೀಮಿತವಾಗುತ್ತಿದೆ. ದೆಹಲಿಯಲ್ಲಿ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ. ಆದಾಗ್ಯೂ ನಯಾಪೈಸೆ ಸಾಲ ಮಾಡಿಲ್ಲ. ನಮ್ಮಲ್ಲಿ ಏನೂ ಉಚಿತವಾಗಿ ಕೊಡುತ್ತಿಲ್ಲವಾದರೂ ಏಳೂವರೆ ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಇದು ಭ್ರಷ್ಟ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಇರುವ ವ್ಯತ್ಯಾಸ ಎಂದರು. ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡಿ ಮಾತನಾಡಿದರು. ಆಪ್ ರಾಜ್ಯ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಮೋಹನ್ ದಾಸರಿ ಮತ್ತಿತರರು ಉಪಸ್ಥಿತರಿದ್ದರು. *ಎಸ್.ಲಕ್ಷ್ಮೀನಾರಾಯಣ