Advertisement

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

11:41 AM Nov 19, 2024 | Team Udayavani |

ಚೆನ್ನೈ: ಕಳೆದ ಎರಡು ದಿನಗಳಿಂದ ಬಹುಭಾಷಾ ನಟಿ ಕೀರ್ತಿ ಸುರೇಶ್‌ (Keerthy Suresh) ಅವರ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ಕುರಿತು ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

Advertisement

ಕೆಲ ದಿನಗಳ ಹಿಂದಷ್ಟೇ ಕೀರ್ತಿ ಸುರೇಶ್‌ ತಮ್ಮ ಪೋಷಕರು ನೋಡಿದ ಹುಡುಗನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಈಗ ಮದುವೆ ದಿನ ಹಾಗೂ ಹುಡುಗನ ಕುರಿತು ವಿಚಾರ ಬಹಿರಂಗವಾಗಿದೆ.

ಕೀರ್ತಿ ಸುರೇಶ್ ಡಿಸೆಂಬರ್ ತಿಂಗಳಿನಲ್ಲಿಆಕೆಯ ಪೋಷಕರಿಂದ ನಿಶ್ಚಯಿಸಲ್ಪಟ್ಟ ಹುಡುಗನ ಜತೆ ಗೋವಾದಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಮಾತಿನ ನಡುವೆಯೇ ಅವರು ಯಾರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಆಗಿದೆ.

ಡಿಸೆಂಬರ್ ಎರಡನೇ ವಾರದಲ್ಲಿ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ (Antony Thattil) ಅವರೊಂದಿಗೆ ಕೀರ್ತಿ ಸುರೇಶ್‌ ಅವರು ವಿವಾಹವಾಗಲಿದ್ದಾರೆ ಎಂದು ವರದಿ ಆಗಿದೆ.

Advertisement

ಆಂಟೋನಿ ದುಬೈ ಮೂಲದ ಉದ್ಯಮಿಯಾಗಿದ್ದು, ಕಳೆದ 15 ವರ್ಷಗಳಿಂದ ಕೀರ್ತಿ ಹಾಗೂ ಆಂಟೋನಿ ರಿಲೇಷನ್‌ ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್‌ 11, 12 ರಂದು ಎರಡು ಕುಟುಂಬದವರ ಸಮ್ಮುಖದಲ್ಲಿ ಗೋವಾದಲ್ಲಿ ವಿವಾಹ ಸಮಾರಂಭ ನೆರವೇರಲಿದೆ ಎಂದು ವರದಿ ತಿಳಿಸಿದೆ.

ಆಂಟೋನಿ ಹಾಗೂ ಕೀರ್ತಿ ಜತೆಯಾಗಿ ಶಾಲೆಗೆ ಹೋಗುತ್ತಿದ್ದರು. ಹೈಸ್ಕೂಲ್‌ನಿಂದಲೂ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಸದ್ಯ ಈ ಬಗ್ಗೆ ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯ ಕೀರ್ತಿ ಸುರೇಶ್‌ ಅವರು ʼಬೇಬಿ ಜಾನ್‌ʼ ಬೇಬಿ ಜಾನ್. ʼರಿವಾಲ್ವರ್ ರೀಟಾʼ ಮತ್ತು ʼಕನ್ನಿವೇದಿʼ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next