ದಕ್ಷಿಣೆಯನ್ನು ಇಡುವುದರಿಂದ ಜೀವನದಲ್ಲಿ ತ್ಯಾಗ ಭಾವನೆ ನಿರ್ಮಾಣವಾಗುತ್ತದೆ. ತ್ಯಾಗದಿಂದ ವಿರಕ್ತಿ, ವಿರಕ್ತಿಯಿಂದ ವೈರಾಗ್ಯವು ಮೂಡುತ್ತದೆ. ಹಿಂದೂ ಧರ್ಮದ ಮೂಲ ತ್ಯಾಗದಲ್ಲಿ ಅಡಗಿದೆ. ದಕ್ಷಿಣೆಯನ್ನು ನೀಡಿ ತ್ಯಾಗ ಮಾಡಲು ಕಲಿಯುವುದು ಕರ್ಮಕಾಂಡದ ಮೊದಲನೆಯ ಮೆಟ್ಟಿಲು. ದಕ್ಷಿಣೆಯನ್ನು ಲಕ್ಷ್ಮೀ ಯ ರೂಪ ಅಂದರೆ ಶಕ್ತಿಯ ರೂಪವೆಂಬ ನಂಬಿಕೆ ಇದೆ. ಹೀಗಾಗಿ, ಅವಳ ಪೂಜೆ ಮಾಡುವುದರಿಂದ ನಾವು ಮಾಡುತ್ತಿರುವ ಯಾವುದೇ ಕೆಲಸಕ್ಕೆ ಶಕ್ತಿ ಅನುಸಂಧಾನವಾಗುತ್ತದೆ. ಇದರಿಂದ ಆ ಕರ್ಮದಿಂದ ದೊರಕುವ ಫಲ ಕೂಡ ಪುಣ್ಯವೇ ಆಗಿರುತ್ತದೆ ಎಂಬ ನಂಬಿಕೆ ಇದೆ.
ಅರುಣ್ ಹೆಚ್.ವಿ
(ಆಧಾರ : ಸನಾತನ ಸಂಸ್ಥೆ ಪ್ರಕಟಿತ
“ಪೂಜಾಸಾಮಗ್ರಿಯ ಮಹತ್ವವೇನು? ಕೃತಿಯಿಂದ)