Advertisement

ಯೋಧರ ಚಲನವಲನಗಳ ಮಾಹಿತಿ ಗೌಪ್ಯವಾಗಿಡಿ

12:30 AM Feb 25, 2019 | |

ಜಮ್ಮು/ಹೊಸದಿಲ್ಲಿ: “ರೈಲುಗಳಲ್ಲಿ ಸಂಚರಿಸುವ ಯೋಧರು,ಸಾಗಿಸಲಾಗುವ ಸೇನಾ ಸಲಕರಣೆಗಳ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಿ.’ಇಂತಹುದೊಂದು ಸೂಚನೆಯನ್ನು ರೈಲ್ವೆ ಇಲಾಖೆಯು ತನ್ನ ವಲಯ ಕಚೇರಿಗಳಿಗೆ ರವಾನಿಸಿದೆ. 

Advertisement

ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ವಲಯ ಕಚೇರಿಗಳಿಗೆ ರೈಲ್ವೆ ಇಲಾಖೆಯು ಪತ್ರವೊಂದನ್ನು ಬರೆದಿದ್ದು, “ಯೋಧರ ಸಂಚಾರ, ಟ್ಯಾಂಕ್‌, ಗನ್‌ ಮತ್ತಿತರ ಸೇನಾ ಸಲಕರಣೆಗಳ ಸಾಗಾಟದ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಳ್ಳಬೇಕು. ಸೇನೆಯ ವಿಶೇಷ ರೈಲುಗಳ ಚಲನವಲನಗಳ ಮಾಹಿತಿ ಯನ್ನು ಯಾರಿಗೂ ನೀಡಬಾರದು. ಹಿರಿಯ ರೈಲ್ವೆ ಅಧಿಕಾರಿ, ರಕ್ಷಣಾ ಇಲಾಖೆ ಅಥವಾ ಗುಪ್ತಚರ ಅಧಿಕಾರಿ ಎಂದು ಹೇಳಿ ಯಾರಾದರೂ ಕರೆ ಮಾಡಿದರೂ, ಮಾಹಿತಿಯನ್ನು ನೀಡಬಾರದು’ ಎಂಬ ಖಡಕ್‌ ಸೂಚನೆಯನ್ನು ನೀಡಲಾಗಿದೆ.

ಈ ಕುರಿತ ನಿರ್ದೇಶನವನ್ನು ತುರ್ತಾಗಿ ಎಲ್ಲ ಸ್ಟೇಷನ್‌ ಮಾಸ್ಟರ್‌ಗಳು, ಕಂಟ್ರೋಲರ್‌ಗಳು ಹಾಗೂ ಸ್ಟೇಷನ್‌ ಸಿಬ್ಬಂದಿಗೆ ರವಾನಿಸಬೇಕು. ಯಾರಾದರೂ ಇದನ್ನು ಉಲ್ಲಂ ಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಎಚ್ಚರಿಸಲಾಗಿದೆ.

ವದಂತಿ ನಂಬಬೇಡಿ: ಪುಲ್ವಾಮಾ ದಾಳಿಯ ಬಳಿಕದ ಕೆಲವು ಬೆಳವಣಿಗೆಗಳಿಂದ ಜಮ್ಮು- ಕಾಶ್ಮೀರದ ನಿವಾಸಿಗಳಲ್ಲಿ ಆತಂಕ ಉಂಟಾಗಿ ದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಎನ್‌ಸಿ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು ಭಾನುವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಯಾವುದೇ ವದಂತಿಗಳನ್ನು ನಂಬಬೇಡಿ. ಶಾಂತವಾಗಿರಿ ಎಂದು ಕಣಿವೆ ರಾಜ್ಯದ ಜನತೆಗೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಕರೆ ನೀಡಿದ್ದಾರೆ.

ಹಿಂಬಾಗಿಲ ಮಾತುಕತೆ?: ಎರಡೂ ದೇಶಗಳ ನಡುವಿನ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊ ಳಿ ಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕ್‌ ನಡುವೆ ಹಿಂಬಾಗಿಲ ಮಾತುಕತೆ ನಡೆಯುತ್ತಿ ದೆಯೇ? ಹೌದು ಎನ್ನುತ್ತಿದೆ ಮೂಲಗಳು. ಕಳೆದ ವಾರವಷ್ಟೇ ಪಾಕ್‌ನ ಆಡಳಿತಾರೂಢ ತೆಹ್ರೀಕ್‌-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ರಮೇಶ್‌ ಕುಮಾರ್‌ ವಂಕ್ವಾನಿ ಅವರು ಭಾರತಕ್ಕೆ ಆಗಮಿಸಿ ಪ್ರಧಾನಿ ಮೋದಿ, ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಸಚಿವ ವಿ.ಕೆ.ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ.  ಈ ವೇಳೆ, ಹದಗೆಟ್ಟಿರುವ ಪರಿಸ್ಥಿತಿಯನ್ನು ಸುಧಾರಿ ಸುವ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ಈ ಮಾತು ಕತೆ ಬಳಿಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ವಂಕ್ವಾನಿ ಅವರು ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

ಸುಪ್ರೀಂ ಮೆಟ್ಟಿಲೇರಿದ ಯೋಧರ ಪುತ್ರಿಯರು
ಭದ್ರತಾ ಪಡೆಯ ಯೋಧರ ಮಾನವ ಹಕ್ಕುಗಳನ್ನು ರಕ್ಷಿಸಲು ಹೊಸ ನೀತಿಯೊಂದನ್ನು ಜಾರಿ ಮಾಡುವಂತೆ ಕೋರಿ ಸೇನಾಧಿಕಾರಿಗಳ ಇಬ್ಬರು ಪುತ್ರಿಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. 19 ವರ್ಷದ ಪ್ರೀತಿ ಕೇದಾರ್‌ ಗೋಖಲೆ ಮತ್ತು 20ರ ಹರೆಯದ ಕಾಜಲ್‌ ಮಿಶ್ರಾ ಅರ್ಜಿದಾರರು. ಸೇನಾ ಕರ್ತವ್ಯ ನಿರ್ವಹಿಸುವಾಗ ಪ್ರತಿಭಟನಾಕಾರರು ಅಥವಾ ಇತರರಿಂದ ಯೋಧರ ಮೇಲೆ ದಾಳಿಗಳು ನಡೆಯುತ್ತಿವೆ. ಇಂಥದ್ದನ್ನು ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸೋಮವಾರ ಈ ಅರ್ಜಿ ವಿಚಾರಣೆಗೆ ಬರಲಿದೆ.

ಅರೆಸೇನಾಪಡೆಗಳ ಭತ್ಯೆ ಹೆಚ್ಚಳ
ಜಮ್ಮು-ಕಾಶ್ಮೀರದಲ್ಲಿ ಮತ್ತು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಅರೆಸೇನಾ ಪಡೆಗಳ ಯೋಧರ ವಿಶೇಷ ಭತ್ಯೆಯನ್ನು ಹೆಚ್ಚಳ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಉನ್ನತ ಅಧಿಕಾರಿಗಳ ಭತ್ಯೆಯನ್ನು ಮಾಸಿಕ 8,100ರೂ. ಮತ್ತು ಕೆಳಹಂತದ ಯೋಧರ ಭತ್ಯೆಯನ್ನು 7,600 ರೂ. ಏರಿಸಲಾಗಿದೆ. ಅಂದರೆ, ಇವರು ಇನ್ನು ಮುಂದೆ ಕ್ರಮವಾಗಿ ಮಾಸಿಕ 25 ಸಾವಿರ ರೂ. ಮತ್ತು 17,300 ರೂ. ಭತ್ಯೆ ಪಡೆಯಲಿದ್ದಾರೆ.

ಪುಲ್ವಾಮಾ ದಾಳಿಯು ಅತಿದೊಡ್ಡ ಭದ್ರತಾ ವೈಫ‌ಲ್ಯ. ಜೈಶ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಮೌಲಾನಾ ಅಲ್ಲ, ಅವನೊಬ್ಬ ಶೈತಾನ.
– ಅಸಾದುದ್ದೀನ್‌ ಒವೈಸಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next