Advertisement

ಕನಿಷ್ಠ ಶೇ.65ರಷ್ಟು ಸಿಡಿ ಅನುಪಾತ ಕಾಯ್ದುಕೊಳ್ಳಿ

01:13 PM Mar 28, 2017 | |

ದಾವಣಗೆರೆ: ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಸಾಲ ನೀಡಿಕೆ, ಠೇವಣಿ ಸೀÌಕೃತಿಯ ಅನುಪಾತವನ್ನು ಕನಿಷ್ಠ 65ರಷ್ಟು ಸಾಧಿಸಲೇಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತಾಕೀತು ಮಾಡಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಪುಸ್ತಕ ಬಿಡುಗಡೆಗೊಳಿಸಿ, ಮಾತನಾಡಿದರು.

Advertisement

ಅನೇಕ ಬ್ಯಾಂಕ್‌ಗಳು ಸಿಡಿ ಅನುಪಾತ ಕಾಪಾಡಿಕೊಂಡಿಲ್ಲ. ಸಾಲ ನೀಡಿಕೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಕೆಲ ಬ್ಯಾಂಕ್‌ಗಳು ಎರಡಂಕಿ ಸಹ ಮುಟ್ಟಿಲ್ಲ. ಅಂತಹ ಬ್ಯಾಂಕ್‌ಗಳು ಮುಂದಿನ ದಿನಗಳಲ್ಲಿ ತಮ್ಮ ನಿರೀಕ್ಷಿತ ಗುರಿ ಸಾಧಿಸಲು ಶ್ರಮಿಸಬೇಕಿದೆ ಎಂದರು. ಸಭೆ ಆರಂಭದಲ್ಲಿ ಮಾತನಾಡಿದ ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ. ಯರ್ರಿಸ್ವಾಮಿ, ಈ ವರ್ಷ ಜಿಲ್ಲೆಯ ಎಲ್ಲಾ ಬ್ಯಾಂಕ್‌ ಗಳ ಮೂಲಕ ಒಟ್ಟು 3704.26 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.

ಜಿಲ್ಲೆಯಲ್ಲಿ 125 ರಾಷ್ಟ್ರೀಕೃತ, 64 ಗ್ರಾಮೀಣ, 14 ಡಿಸಿಸಿ, 34 ಖಾಸಗಿ, 7 ಭೂ ಅಭಿವೃದ್ಧಿ/ಇತರೆ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳ ಮೂಲಕ ಆದ್ಯತಾ ವಲಯಕ್ಕೆ 3166.14 ಕೋಟಿ, ಆದ್ಯತಾರಹಿತ ವಲಯಕ್ಕೆ 538.12 ಕೋಟಿ ರೂ. ಸಾಲ ನೀಡುವ ಉದ್ದೇಶ ಇದೆ ಎಂದರು. ಕೃಷಿಗೆ 2124.14 ಕೋಟಿ ರೂ., ಕೈಗಾರಿಕೆಗೆ 467.29 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ 2425.77 ಕೋಟಿ, ಗ್ರಾಮೀಣ ಬ್ಯಾಂಕ್‌ ಮೂಲಕ 931.45 ಕೋಟಿ, ಸಹಕಾರಿ ಬ್ಯಾಂಕ್‌ ಮೂಲಕ 340.04 ಕೋಟಿ ರೂ. ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಅವರು ನೀಡಿದರು. ಕಳೆದ ಸಾಲಿನಲ್ಲಿ 2371.51 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಇದರಲ್ಲಿ 2156.16 ಕೋಟಿ ರೂ. ಸಾಲ ನೀಡಲಾಗಿದೆ.

ಕೃಷಿ ವಲಯಕ್ಕೆ 1,410 ಗುರಿಯಲ್ಲಿ 1260 ಕೋಟಿ ರೂ., ಕೈಗಾರಿಕಾ ವಲಯಕ್ಕೆ 284 ಕೋಟಿ ರೂ. ಗುರಿಯಲ್ಲಿ 283 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು. ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಪ್ರಗತಿ ಕುರಿತು ಪ್ರಶ್ನಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ಆಧಾರ್‌ ಜೋಡಣೆ ಕಾರ್ಯ ಚುರುಕುಗೊಳಿಸಿ.

Advertisement

ಗ್ರಾಹಕರು ಯಾವುದೇ ಕಾರಣಕ್ಕೂ ಬ್ಯಾಂಕ್‌ಗೆ ಬಂದು ಆಧಾರ್‌ ಜೋಡಣೆಗೆ ಮುಂದಾಗುವುದಿಲ್ಲ. ಅವರನ್ನು ನೀವೇ ಸಂಪರ್ಕಿಸಿ ಆಧಾರ್‌ ಸಂಖ್ಯೆ ಜೋಡಣೆ ಮನವರಿಕೆ ಮಾಡಿಕೊಡಿ ಎಂದರು. ಇದಕ್ಕೆ ಉತ್ತರಿಸಿದ ಯರ್ರಿಸ್ವಾಮಿ, ಜಿಲ್ಲೆಯಲ್ಲಿ ಒಟ್ಟು 19.53 ಲಕ್ಷ ಬ್ಯಾಂಕ್‌ ಖಾತೆಗಳಿದ್ದು, 1.62 ಲಕ್ಷ ಖಾತೆಗಳು ಚಾಲ್ತಿಯಲ್ಲಿಲ್ಲ.

17.91 ಲಕ್ಷ ಖಾತೆಯಲ್ಲಿ 10.03 ಲಕ್ಷ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗಿದೆ. ಇನ್ನೂ 7.88  ಲಕ್ಷ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಆಗಬೇಕಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ನೀವು ನಮಗೆ ಒಪ್ಪಿಗೆ ಪತ್ರದ ಅರ್ಜಿ ನೀಡಿ. 

ನಾವು ಉದ್ಯೋಗ ಖಾತ್ರಿ ಕೂಲಿಕಾರರ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆಯ ಒಪ್ಪಿಗೆ ಪತ್ರ ಪಡೆದುಕೊಂಡು ನೀಡುತ್ತೇವೆ ಎಂದರು. ಕೆನರಾ ಬ್ಯಾಂಕ್‌ ಕ್ಷೇತೀಯ ಮಹಾಪ್ರಬಂಧಕ ಎಚ್‌.ಎಂ. ಕೃಷ್ಣ, ಆರ್‌ಬಿಐನ ವಲಯ ವ್ಯವಸ್ಥಾಪಕ ಪಟ್ನಾಯಕ್‌, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರವೀಂದ್ರ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next